ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಪ್ರವಾಸೋದ್ಯಮ ದಲ್ಲಿ ದಾಖಲೆ ಮಾಡಿದ ಪ್ರವಾಸಿ ಕೇಂದ್ರ ಪಣಸೋಲಿ ಯಲ್ಲಿ ಬಿ ಎಸ್ ಎನ್ ಎಲ್ ನೆಟ್ವರ್ಕ್ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ತರು ಇಲಾಖೆಗೆ ದಿಕ್ಕಾರ ಹಾಕಿದ ಘಟನೆ ನಡೆದಿದೆ, ಜೋಯಿಡಾ ತಾಲೂಕು ಹಿಂದುಳಿಯಲು ಹಲವು ಇಲಾಖೆ ಗಳ ಕಾರ್ಯವೈಖರಿಸರಿಯಾಗಿ ಇಲ್ಲ ದಿರುವುದೇ ಆಗಿದೆ ಅದರಲ್ಲೂ ಬಿ ಎಸ್ ಎನ್ ಎಲ್ ನೆಟ್ವರ್ಕ್ ಇಲ್ಲದ ತಾಲೂಕಿಗೆ ಕೇಂದ್ರ ಸರಕಾರ 47 ನೆಟ್ವರ್ಕ್ ಟವರ್ ಗಳನ್ನು ನೀಡಿ ಎರಡು ವರ್ಷ ಕಳೆಯಿತು, ಒಂದರ ಕೆಲಸವೂ ತಾಲೂಕಿನಲ್ಲಿ ಸರಿಯಾಗಿ ಆಗುತ್ತಿಲ್ಲ ಕಳೆದ ಆರು ತಿಂಗಳ ಹಿಂದೆ ಪಣಸೋಲಿ ಯಲ್ಲಿ ಒಂದು ಟವರ್ ನಿರ್ಮಿಸಲಾಯಿತು ಇದಕ್ಕೆ ಕೆಲವು ದಿನ ನೆಟ್ವರ್ಕ್ ನೀಡಿದ ಇಲಾಖೆ ಮತ್ತೆ ನೆಟ್ವರ್ಕ್ ನಿಲ್ಲಿಸಿದೆ ಜನರು ಕಾರಣ ಕೇಳಿದರೆ ಇಲ್ಲದ ಸಬೂಬನ್ನು ಇಲಾಖೆ ಹೇಳುತ್ತಿದೆ ಆದರೆ ನೆಟ್ವರ್ಕ್ ಮಾತ್ರ ನೀಡುತ್ತಿಲ್ಲ ಎಂದು ಸ್ಥಳೀಯರು ಪ್ರತಿಭಟನೆ ಮಾಡಿ ದಿಕ್ಕಾರ ಹಾಕಿದರು.
ಎಲ್ಲಿಯ ವರೆಗೆ ಹೋರಾಟ ನೆಟ್ವರ್ಕ್ ಬರುವ ವರೆಗೂ ಹೋರಾಟ ಎಂದು ಇಲಾಖೆಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು ಸೇರಿದ ಜನರು ಇಲಾಖೆಯ ಹಲವು ಕರ್ತವ್ಯ ಚ್ಯುತಿಯ ಬಗ್ಗೆ ಖಂಡಿಸಿ ಕೂಡಲೇ ನೆಟ್ವರ್ಕ್ ನೀಡುವಂತೆ ಆಗ್ರಹಿಸಿದರು. ಪ್ರತಿದಿನ ಇಲ್ಲಿ ಸಾವಿರಾರು ಪ್ರವಾಸಿಗರು ಬರುತ್ತಾರೆ ಅವರಿಗೆಲ್ಲ ಯಾವುದೇ ನೆಟ್ವರ್ಕ್ ಇಲ್ಲಿ ಸಿಗದೇ ತೊಂದರೆ ಯಾಗುತ್ತಿದೆ.
ಅವರ ವ್ಯವಸ್ಥೆ ಮಾಡುವ ಸ್ಥಳೀಯರಿಗೆ ಶಾಲೆಯ ಕಾಲೇಜಿನ ಮಕ್ಕಳಿಗೆ ಸಾರ್ವಜನಿಕ ರಿಗೆ ಎಲ್ಲರಿಗೂ ಇಂದಿನ ಕಾಲದ ಅವಶ್ಯಕತೆ ಗಳಲ್ಲಿ ಒಂದಾದ ನೆಟ್ವರ್ಕ್ ಇಲ್ಲ ದಿದ್ದರೆ ಹೇಗೆ ಎಂದು ಪ್ರತಿಭಟನಾ ಕಾರರು ಹೇಳಿದರು ಜೊತೆಗೆ ಇಲಾಖೆಯ ಬೇಜವಾಬ್ದಾರಿ ಬಗ್ಗೆ ದಿಕ್ಕಾರ ಹಾಕಿದರು ಕೂಡಲೇ ವ್ಯವಸ್ಥೆ ಸರಿ ಮಾಡಿ ಈ ಬಗ್ಗೆ ನಾವು ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳಿಗೆ ಎರಡು ತಿಂಗಳಿಂದ ಹೇಳುತ್ತಲೇ ಇದ್ದೇವೆ ಇನ್ನೂ ನೆಟ್ವರ್ಕ್ ಸರಿ ಮಾಡಿ 4G ಬರುವಂತೆ ಮಾಡದಿದ್ದರೆ ಬಿ ಎಸ್ ಎನ್ ಎಲ್ ಕಚೇರಿ ಮುಂದೆ ಸತ್ಯಾಗ್ರಹ ಮಾಡುತ್ತೇವೆ ಎಂದು ಪಣಸೋಲಿ ಜನತೆ ಎಚ್ಚರಿಕೆ ನೀಡಿದ್ದಾರೆ
