ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಮೇಲಿನ ದಬಗಾರ ದಲ್ಲಿ ಕೃಷಿ ಕೂಲಿಕಾರ ಶಂಕರ ಗಣಪಯ್ಯ ಪಟಗಾರ ಯರಮುಖ ಇವರನ್ನು ಆತ್ಮೀಯ ವಾಗಿ ದಬಗಾರ ದ ಸುಬ್ರಾಯ ನರಸಿಂಹ ದಬಗಾರ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಿದರು, ಶಂಕರ ಪಟಗಾರ ಕುಟುಂಬ ಯರಮುಖ ದಲ್ಲಿ ಮನೆ ಮಾಡಿಕೊಂಡು ಸುತ್ತ ಮುತ್ತಲು ಹಳ್ಳಿ ಗಳಲ್ಲಿ ಕೃಷಿ ಕೂಲಿ ಮಾಡುತ್ತಾ ಕಳೆದ ಐವತ್ತು ವರ್ಷ ಗಳಿಂದ ವಾಸವಾಗಿದೆ, ಕುಮಟಾ ತಾಲೂಕಿನಿಂದ ಚಿಕ್ಕಂದಿನಿಂದ ಲೇ ಗುಂದ ಊರಿಗೆ ಬಂದು ಕೆಲಸ ಮಾಡುತ್ತಾ ಊರಿನಲ್ಲಿ ಎಲ್ಲರ ಪ್ರೀತಿ ಗಳಿಸಿದವರು ಸುಮಾರು ಐವತ್ತು ವರ್ಷ ಗಳಿಂದ ಇಲ್ಲಿ ಸ್ಥಳೀಯ ರಂತೆ ಎಲ್ಲರೊಂದಿಗೆ ಬೆರೆಯುತ್ತಾ ಯಾರಲ್ಲೂ ಒಮ್ಮೆಯೂ ಜಗಳ ಗಲಾಟೆ ಮಾಡಿ ಕೊಂಡವರಲ್ಲ, ಈಗ ಇಳಿ ವಯಸ್ದಿನಲ್ಲೂ ನಗು ಮೊಗದಿಂದಲೇ ಕೃಷಿ ಕಾರ್ಯ ಮಾಡುತ್ತಿದ್ದಾರೆ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಇಬ್ಬರಿಗೂ ಮದುವೆ ಮಾಡಿದ್ದಾರೆ, ಮೂವರು ಮೊಮ್ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದು ಎಲ್ಲದಕ್ಕೂ ಪತ್ನಿ ಬೈರಿ ಅವರ ಸಹಕಾರ ವಿದೆ, ಮೊದಲನೇ ಮಗ ವಿನಾಯಕ ಸಹಕಾರಿ ಸಂಘದ ನಿರ್ದೇಶಕರು ಜೊತೆಗೆ ಕೃಷಿ ಕೆಲಸಕ್ಕೆ ಟೈಮ್ ಗೆ ಹಾಜರಾಗುತ್ತಾರೆ, ಎರಡನೇ ಮಗ ರಾಜು ಕೂಡ ಯಾವುದೇ ಕೆಲಸಕ್ಕೆ ವೇಳೆಗೆ ರೆಡಿ ಆಗುವ ಮಾಲಕ ತಂದೆ ತಾಯಿ ಅವರಿಗೆ ಸಾಥ್ ನೀಡುತ್ತಿದ್ದಾರೆ, ಹೀಗಾಗಿ ಹಲವು ಕುಟುಂಬ ದವರ ಕೆಲಸ ಕಾರ್ಯ ಗಳು ಸುಲಭ ವಾಗಿ ಸಾಗುತ್ತಿವೆ, ಮುಂದಿನ ದಿನಗಳಲ್ಲಿ ಕೃಷಿ ಕೆಲಸ ಗಳಿಗೆ ಕೂಲಿ ಆಳುಗಳ ಸಮಸ್ಯೆ ಉಂಟಾಗುವ ದಿನಗಳು ದೂರವಿಲ್ಲ,ಹಾಗಾಗಿ ಇರುವ ಕೃಷಿಕೂಲಿ ಗಾರರನ್ನು ಗೌರವಿಸಿ ಅವರೂ ಸಮಾಜದ ಒಂದು ಅಂಗ ಎನ್ನುವ ಕಲ್ಪನೆಯನ್ನು ಅವರಿಗೆ ಮತ್ತು ಸಮಾಜಕ್ಕೆ ತಲುಪಿಸುವ ಉದ್ದೇಶ ದಿಂದ ಶಂಕರ ಪಟಗಾರ ಅವರಿಗೆ ಗೌರವಿಸುವ ಮೂಲಕ ಕೃಷಿ ಕೂಲಿ ಕಾರ್ಮಿಕರನ್ನು ಗೌರವಿಸಲಾಗಿದೆ ಎಂದು, ಸುಬ್ರಾಯ ದಬಗಾರ ಹೇಳುತ್ತಾರೆ. ಈ ಗೌರವ ಕ್ಕೆ ಶಂಕರ ಪಟಗಾರ ಅತ್ಯಂತ ಸಂತಸ ವ್ಯಕ್ತ ಪಡಿಸಿದ್ದಾರೆ.