ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು,ಮಧ್ಯಾಹ್ನ,ಸಂಜೆಯ ವೇಳೆ ಬೀಳುತ್ತಿದ್ದ ಗುಡುಗು ಮಿಂಚಿನ ಮಳೆಯು ಈಗ ಬೆಳಗ್ಗಿನ ಜಾವದಿಂದ ಪ್ರಾರಂಭವಾಗಿದೆ.
ಭತ್ತದ ತೆನೆಗಳು ಹೂಬಿಟ್ಟು,ಭತ್ತ ವಾಗುವ ಸಂದರ್ಭದಲ್ಲಿ ಮಳೆ ಬೀಳುತ್ತಿದೆ.ಇನ್ನು ಅಡಿಕೆ ಬೆಳೆಗಾರರ ಗೋಳು ಹೇಳತೀರದು,ಭಾರಿ ಗಾಳಿ ಮನೆಯಿಂದ ಬಾಳೆ,ಫಲಭರಿತ ಅಡಿಕೆ ಮರಗಳು,ಸಣ್ಣ ಸಸಿಗಳು ಮುರಿದು ಬಿದ್ದಿದ್ದು,ಬಿಸಿಲು ಮಳೆಯ ವಾತಾವರಣದಿಂದ ಅಡಿಕೆಗೆ ಕೊಳೆ ರೋಗದ ಭಾದೆ ಮುಂದುವರೆದಿದ್ದು, ಹಲವು ಬಾರಿ ಔಷಧಗಳನ್ನು ಸಿಂಪಡಿಸಿದರು,ಕೊಳೆ ರೋಗ ಹತೋಟಿಗೆ ಬರದೇ ಇದ್ದದ್ದು, ಹವಮಾನ ಇಲಾಖೆಯವರು ಮೂರು ದಿನಗಳ ಆರೆಂಜ್ ಅಲರ್ಟ್ ಘೋಷಿಸಿದ್ದು, ಹೇಗೆ ಬೆಳೆಯನ್ನು ಕಾಪಾಡಿಕೊಳ್ಳುವುದು ಎಂಬುದು ರೈತರು ಕಂಗಾಲಾಗುವಂತೆ ಮಾಡಿದೆ.
