ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನಬೀಗಾರ ಬಾಗಿನಕಟ್ಟ ಕೂಡು ಬ್ರಿಜ್ ಮೇಲೆ ಪ್ರತಿವರ್ಷದಂತೆ ಶನಿವಾರ ಬೆಳದಿಂಗಳ ಊಟವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ
ಬಿಜೆಪಿ ರಾಜ್ಯವಕ್ತಾರ ಹರಿಪ್ರಕಾಶ್ ಕೋಣೆಮನೆ ಉಪಸ್ಥಿತರಿದ್ದು ಮಾತನಾಡಿ -ಗ್ರಾಮೀಣ ಭಾಗದಲ್ಲಿ ಆಲೆಮನೆ ಹಬ್ಬ ಹಾಗೂ ಇಂತಹ ಬೆಳದಿಂಗಳ ಊಟ ವನ್ನು ಇಟ್ಟು ಅಚ್ಚುಕಟ್ಟಾಗಿ ಆ ಯೋಜನೆ ಮಾಡುತ್ತಿರುವ ಸಂಘಟನೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಧುರೀಣರಾದ ಉಮೇಶ್ ಭಾಗವತ್, ವಿ ಎನ್ ಭಟ್ ವಜ್ರಳ್ಳಿ, ಜಿ ಆರ್ ಭಾಗವತ್ ತಾರಿಕುಂಟೆ, ಮತ್ತಿತರರು ಉಪಸ್ಥಿತರಿದ್ದರು.
ಈ ಬೆಳದಿಂಗಳ ಊಟವನ್ನು ಅತ್ಯಂತ ಸುವ್ಯವಸ್ಥಿತವಾಗಿ ಸಂಘಟಿಸಲಾಗಿತ್ತು.

 

ಸುಬ್ರಾಯ ಭಟ್ಟ, ಗಾಯತ್ರಿ ಗಾoವ್ಕರ್, ಕಾಮಣ್ಣ ಗೌಡ, ಈ ಬೆಳದಿಂಗಳ ಊಟವನ್ನು ಆಯೋಜಿಸಿದ್ದರು. ಈ ಬೆಳದಿಂಗಳ ಊಟದಲ್ಲಿ 150ಕ್ಕೂ ಹೆಚ್ಚು ಜನರು, ಗ್ರಾಮಸ್ಥರು, ಪಾಲ್ಗೊಂಡಿದ್ದರು.