ಸುದ್ದಿ ಕನ್ನಡ ವಾರ್ತೆ
. ಕುಮಟಾ:ರಾಷ್ಟ್ರೀಯ ಹೆದ್ದಾರಿ 66 ರ ಕುಮಟಾ – ಅಂಕೋಲಾ ಹೆದ್ದಾರಿಯಲ್ಲಿ ಸರಕು ತುಂಬಿಕೊಂಡು ಬಂದ ಲಾರಿ, ನಿಯಂತ್ರಣ ತಪ್ಪಿ ನೇರವಾಗಿ ಹೀರೆಗುತ್ತಿಯ ತಾತ್ಕಾಲಿಕ ಪೊಲೀಸ್ ಚೆಕ್ ಪೊಸ್ಟ ಮೇಲೆ ಹರಿದು ಚೆಕ್ ಪೊಸ್ಟ ನುಜ್ಜು ಗುಜ್ಜಾಗಿದ್ದು,ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಪೋಲಿಸ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದೆ.
ಘಟನೆಯಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಐಆರ್ ಬಿ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚತುಷ್ಪಥ ಕಾಮಗಾರಿ ವಿಳಂಬ ಹಾಗೂ ಅಸಮರ್ಪಕ ನಿರ್ವಹಣೆಗೆ ಕೆಂಡಕಾರಿದ್ದಾರೆ. ಸದ್ಯ ಘಟನೆ ಸಂಬಂಧ ಗೋಕರ್ಣ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
