ಸುದ್ದಿ ಕನ್ನಡ ವಾರ್ತೆ
. ಶಿರಸಿ:ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸೋಂದಾ ಸ್ವರ್ಣವಲ್ಲೀ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಕಿರಿಯ ಶ್ರೀ ಆನಂದ ಭೋಧೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಸಾನಿಧ್ಯದಲ್ಲಿ ಬುಧವಾರ ಕಾರ್ತಿಕ ಮಾಸದ ಪ್ರತಿಪದೆಯ ಬಲಿಪಾಡ್ಯದಂದು ಗೋವರ್ಧನ ಗೋಪೂಜೆಯು ಉಭಯ ಶ್ರೀಗಳ ಸಾನಿಧ್ಯದಲ್ಲಿ ನಡೆಯಿತು.
ಗೋವುಗಳಿಗೆ ವಿಶೇಷ ಸಂಕಲ್ಪ ಪೂರ್ವಕ ಪೂಜೆಯನ್ನು ಗೋಗ್ರಾಸವನ್ನು ನೀಡಿದರು.ದನ ಬಯಲಿನಲ್ಲಿ ಪಂಚಾಂಗ ಶ್ರವಣ ಹಾಗೂ ಹುಲಿಯಪ್ಪ ದೇವರ ಪೂಜೆ ಇನ್ನಿತರ ಕಾರ್ಯಕ್ರಮಗಳು ನಡೆಯಿತು.
