ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀಕೃಷ್ಣಗಲ್ಲಿಯಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಐದು ದಿನಗಳ ಕಾಲ ನಡೆಯುವ ಶ್ರೀಕೃಷ್ಣ ಮೂರ್ತಿಯ ಪೂಜನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ನಿಮಿತ್ತ ದಿನಾಂಕ: 24-10-2025 ರಂದು ಶುಕ್ರವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ದೇವರ ಪೂಜೆ,ತೀರ್ಥ,ಪ್ರಸಾದ ವಿತರಣೆ.ಮಧ್ಯಾಹ್ನ ಅನ್ನಪ್ರಸಾದ,ಸಂಜೆ ಭಜನಾ ಮಂಡಳಿಯವರಿಂದ ಮಂಡಳಿಯವರಿಂದ ಭಜನೆ ಕಾರ್ಯಕ್ರಮ,ಶ್ರೀ ದೇವರ ಫಲಪ್ರಸಾದಗಳ ಸವಾಲ ಕಾರ್ಯಕ್ರಮ,ಭಕ್ತರ ಮನರಂಜನೆಗಾಗಿ ಶ್ರೀಕೃಷ್ಣ ನಾಟ್ಯ ಮಂಡಳಿಯವರಿಂದ ಶ್ರೀಕೃಷ್ಣ ಹಡಪಡಕರ ವಿರಚಿತ ಹಾಸ್ಯಭರಿತ,ಸಾಹಸಮಯ,ಸಂಗೀತಮಯ “ಅನ್ಯಾಯಚಾ ಬದಲಾ”ಎಂಬ ಮರಾಠಿ ನಾಟಕ ಪ್ರದರ್ಶನ ನಡೆಯಲಿದೆ. ನಾಟಕದ ಪುರುಷ ಪಾತ್ರದಲ್ಲಿ ಸುನಿಲ ದೇಸಾಯಿ,ಸಂದೀಪ ಮಿರಾಶಿ,ದತ್ತಾ ಸಾವಂತ,ಮೋಹನ ಗಾವಡೆ,ಸತೀಶ ಭಾಮೇಕರ,ರವಿ ಸುಧೀರ,ಗುರುದಾಸ ಮಾಪಸೇಕರ,ತುಳಸಿದಾಸ ಭಾಮೇಕರ,ನಾರಾಯಣ ಸೋನಾಲಕರ,ವಿಜಯ ಗಾಂವಕರ,ಸ್ತ್ರೀ ಪಾತ್ರದಲ್ಲಿ ತನ್ವಿ ಕಾರವಾರ ಅಭಿನಯಿಸುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರ ರಾಗಬೇಕೆಂದು ಹಾಗೂ ನಾಟಕ ಪ್ರದರ್ಶನದ ವೀಕ್ಷಣೆಯನ್ನು ಮಾಡಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
