ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ತಾಲೂಕಾ ಕೇಂದ್ರದ ಪಕ್ಕ ದ ಗ್ರಾಮ ಹುಡಸಾ ದಲ್ಲಿ ಭಜನಾ ಸ್ಪರ್ಧೆಯನ್ನು ಬರುವ ಶುಕ್ರವಾರ ಆಯೋಜಿಸಲಾಗಿದೆ.

ಸ್ಥಳೀಯ ಗ್ರಾಮಸ್ಥರು ಸೇರಿ ಭಜನಾ ಸ್ಪರ್ಧೆ ಯ ಆಯೋಜನೆ ಮಾಡಿದ್ದು ವಿವಿಧ ಬಹುಮಾನ ಗಳನ್ನು ಕೂಡ ನೀಡಲಿದ್ದಾರೆ, ಈ ಭಜನಾ ಸ್ಪರ್ಧೆ ಯಲ್ಲಿ ಬಾಗವಹಿಸಲುವಿವಿಧ ಭಜನಾ ತಂಡಗಳು ಈಗಾಗಲೇ ತಯಾರಿ ನಡೆಸಿ ಕೊಂಡಿವೆ.ಜೋಯಿಡಾ, ಮೇಸ್ತ ಬಿರೋಡಾ, ಸಂತ್ರಿ, ವಾಗೇಲಿ, ಹುಡಸಾ, ಕಾರಟೋಲಿ, ಚಾಪೆರ, ದಿಗಳಂಬ ಹೀಗೆ ಹಲವು ಗ್ರಾಮ ಗಳ ಭಜನ ತಂಡ ಗಳು ಸ್ಪರ್ದಿಸಲಿವೆ ಎಂದುತಿಳಿದಿದೆ.

 

ಪ್ರಥಮ ಬಹುಮಾನ ಐದು ಸಾವಿರ, ದ್ವಿತೀಯ ಎರಡು ಸಾವಿರ ಮತ್ತು ಉತ್ತಮ ಹಾಡುಗಾರ ಉತ್ತಮ ತಬಲಾ ಹಾರ್ಮೋನಿಯಂ ನುಡಿಸುವ ಕಲಾವಿದರಿಗೆ ಬಹುಮಾನ ಗಳನ್ನುನೀಡಲು ತೀರ್ಮಾನಿಸಲಾಗಿದೆ,

ಈ ಎಲ್ಲ ಕಾರ್ಯಕ್ರಮ ಗಳಿಗೆ ನಿರ್ಣಾಯಕ ರಾಗಿ ರಾಮನಗರದ ಶಶಿಕಾಂತ ಗಾವಡೆ ಉಪಸ್ಥಿತರಿರುವರು ಶುಕ್ರವಾರ ಮದ್ಯಾಹ್ನ ಸರಿಯಾಗಿ 2 ಘಂಟೆಗೆ ಕಾರ್ಯಕ್ರಮ ಪ್ರಾರಂಭ ವಾಗಲಿದ್ದು ಸ್ಪರ್ದಿ ಸುವ ತಂಡಗಳು ಮದ್ಯಾಹ್ನ 1ಘಂಟೆಯ ಒಳಗೆ ಹಾಜರಾಗಿರಬೇಕು ಎಂದು ತಿಳಿಸಲಾಗಿದೆ, ಕಾರ್ಯಕ್ರಮ ವನ್ನು ಶ್ರೀ ಸರಸ್ವತಿ ಸಮಿತಿ ಮತ್ತು ಗ್ರಾಮಸ್ಥರು ಸಂಘಟಿಸಿದ್ದಾರೆ.