ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಷ್ಟೀಯ ಸ್ವಯಂಸೇವಕ ಸಂಘ ರಾಮನಗರದ ವತಿಯಿಂದ ನಡೆದ ಸಂಘ ಶತಾಭ್ದಿಯ ನಿಮಿತ್ತ ವಿಜಯ ದಶಮಿ ಉತ್ಸವ ಕಾರ್ಯಕ್ರಮ ದಿನಾಂಕ:19 – 10- 2025 ರ ರವಿವಾರ ಮಧ್ಯಾಹ್ನ 3-00 ಗಂಟೆಗೆ,ಸಂಪತ್ ಸ್ಥಳ ಶ್ರೀರಾಮಲಿಂಗೇಶ್ವರ ದೇವಸ್ಥಾನ ಮೈದಾನ ರಾಮನಗರದಲ್ಲಿ ಯಶಸ್ವಿ ಸಂಪನ್ನಗೊಂಡಿತು.
ಸಭಾ ಕಾರ್ಯಕ್ರಮದ ಮೊದಲು ರಾಮನಗರದ ಕೇಂದ್ರ ಸ್ಥಳದಲ್ಲಿ,ಪ್ರಮುಖ ಬೀದಿಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ 126 ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಮಾತೆಯರು ಮನೆಯ ಮುಂದೆ ರಂಗೋಲಿಯನ್ನು ಹಾಕಿ,ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಂದ ದಂಡ ವ್ಯಾಯಾಮ ಪ್ರದರ್ಶನ ನಡೆಯಿತು.ನಂತರ ವೈಯುಕ್ತಿಕ ಗೀತೆ,ಅಮ್ರತ ವಚನ ವಾಚನ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರ್ಮಾಧಿಕಾರಿ ಶ್ರೀ ರಘುವೀರ ಗುರೂಜಿ ಶ್ರೀ ಸಂತೋಷಿಮಾತಾ ಮಠ ಆಶ್ರಮ ಕುಣಗಿನಿಯವರು ಆಶೀರ್ವಚನ ನೀಡಿದರು. ಮುಖ್ಯ ವಕ್ತಾರರಾಗಿ ಆಗಮಿಸಿದ ಶಾರ್ದೂಲ ಅರವಿಂದ ಜೋಶಿ ಖಾನಾಪುರ ಹೋಬಳಿ ಬೌದ್ಧಿಕ ಪ್ರಮುಖರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಹೋದರರು,ಸಹೋದರಿಯರು, ಶ್ರದ್ಧೆಯ ತಾಯಂದಿರು,ಸಂಘದ ಹಿತೈಷಿಗಳು,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
