ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನೀಡುವ ಎನ್. ಟಿ.ಸಿ. ಎ ಅವಾರ್ಡ ಫಾರ್ ಎಕ್ಸಲೆನ್ಸ್ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯ ಮಂತ್ರಿಗಳ ಚಿನ್ನದ ಪದಕಕ್ಕೆ ಪುರಸ್ಕೃತರಾದ ಗುರುರಾಜ್ ಸಾತು ಗೌಡ ಇವರನ್ನು ಸಮಾನ ಮನಸ್ಕ ಗೆಳೆಯರ ಬಳಗವು ಅಂಕೋಲಾ ತಾಲೂಕಿನ ಕೇಣಿಯಲ್ಲಿರುವ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಳೆದ ಕೆಲವು ವರ್ಷಗಳಿಂದ ಹುಟ್ಟಿಕೊಂಡ ಸಮಾನ ಮನಸ್ಕ ಗೆಳೆಯರ ಬಳಗ ನಿವೃತ್ತರ ಹಾಗೂ ವಿಶೇಷ ಸಾಧನೆ ಮಾಡಿದ ಸಾಧಕರ ಮನೆಯಂಗಳಕ್ಕೆ ಹೋಗಿ ಸನ್ಮಾನಿಸಿ ಕುಶಲೋಪರಿ ವಿಚಾರಿಸಿ ಪ್ರೋತ್ಸಾಹಿಸುತ್ತಾ ಬರುತ್ತಿದ್ದು ಸೋಮವಾರ ಅಂಕೋಲಾ ತಾಲೂಕಿನ ಕೇಣಿಯಲ್ಲಿರುವ ವಿಶ್ರಾಂತ ಶಿಕ್ಷಕ,ಕವಿ ಸಾತುಗೌಡರ ಮನೆಯಂಗಳದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕ ಗಣಪತಿ ಗೌಡ ಅಂಬಾರಕೊಡ್ಲಾ ಇವರ ಗಣೇಶನ ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ನಿವೃತ್ತ ಶಿಕ್ಷಕ ಯಕ್ಷಗಾನ ಕಲಾವಿದ ತುಳುಸು ಗೌಡ ಬೆಳಸೆ ಇವರು ಸರ್ವರನ್ನು ಸ್ವಾಗತಿಸಿದರು. ಸನ್ಮಾನಕ್ಕೆ ಪುರಸ್ಕೃತರಾದ ಪ್ರೀತಿಯ ಶಿಷ್ಯ ಗುರುರಾಜ್ ಗೌಡರ ಕಿರು ಪರಿಚಯವನ್ನು ನಿವೃತ್ತ ಶಿಕ್ಷಕ ಬಿ. ಪಿ .ಗೌಡ ಮಾಡಿ ಹೆಮ್ಮೆಪಟ್ಟರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲರು ಸೇರಿ ‘ ಎನ್. ಟಿ.ಸಿ. ಎ ‘ ಅವಾರ್ಡ ಫಾರ್ ಎಕ್ಸಲೆನ್ಸ್ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ಗುರುರಾಜ್ ಗೌಡರನ್ನು ಶಾಲು ಹೊದಿಸಿ,ಮೈಸೂರು ಪೇಟ ತೊಡಿಸಿ,ಹಾರ ಫಲಪುಷ್ಪ ಹಾಗೂ ಶ್ರೀ ಲಕ್ಷ್ಮೀ ದೇವಿಯ ಮೂರ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತಾಡಿದ ಗುರುರಾಜ್ ಗೌಡರು ತಮ್ಮ ಮನೆ ಅಂಗಳಕ್ಕೆ ಬಂದು ಸನ್ಮಾನಿಸಿ ಖುಷಿ ನೀಡಿದ ಬಂಧುಗಳು ನೀಡಿದ ಪ್ರೀತಿಯ ಗೌರವ ಪುರಸ್ಕಾರ ಅಲ್ಲದೆ ಪ್ರಾಥಮಿಕ ಶಿಕ್ಷಣ ಒಂದರಿಂದ ಏಳನೇ ತರಗತಿಯ ತನಕ ತಿದ್ದಿ ಬುದ್ಧಿ ಹೇಳಿದ ಬಿ.ಪಿ.ಗೌಡ ಮತ್ತು ಉಮೇಶ ಗೌಡ ಶಿಕ್ಷಕರನ್ನು ಸದಾ ತನ್ನ ಮನದ ಗುಡಿಯಲ್ಲಿ ಪೂಜಿಸುವದಾಗಿ ಗುರುಗಳ ಬಗ್ಗೆ ತಮ್ಮ ಅಭಿಮಾನವನ್ನು ಎಲ್ಲರ ಜೊತೆ ಪ್ರೀತಿಯಿಂದ ಹಂಚಿಕೊಂಡರು. ಲಕ್ಷ್ಮಣ ಗೌಡ ನಿವೃತ್ತ ಶಿಕ್ಷಕರು ಬಳಗದ ಕುರಿತು ಪರಿಚಯಿಸಿ ನಮ್ಮ ಸಮಾಜದ ಗುರುರಾಜ್ ಗೌಡರ ಸಾಧನೆ ನಮ್ಮ ಸಮಾಜವು ಹೆಮ್ಮೆ ಪಡುವ ವಿಷಯ ಎಂದು ಶುಭಕೋರಿದರು.ಉಮೇಶ ಗೌಡ ಶಿಕ್ಷಕರು ತನ್ನ ಶಿಷ್ಯನ ಕುರಿತಾಗಿ ಹೆಮ್ಮೆಯ ಮಾತಾಡಿ ತಮ್ಮ ಮನದಾಳದ ಖುಷಿ ಹಂಚಿಕೊಂಡರು. ಸುಬ್ರಾಯ ಗೌಡ ಶಿಕ್ಷಕರು ಗುರುರಾಜ್ ಗೌಡರು ನಮ್ಮೂರಿನ ಹೆಮ್ಮೆ ಎಂದು ತಮ್ಮ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕರು, ಕವಿಗಳು, ಗುರುರಾಜ್ ಅವರ ತಂದೆಯವರಾದ ಸಾತು ಗೌಡ ಸರ್ ಮಗನ ಸಾಧನೆಯ ಬಗ್ಗೆ ತಮ್ಮ ಮಾತುಗಳಲ್ಲಿ ಹೆಮ್ಮೆ ವ್ಯಕ್ತ ಪಡಿಸಿದರು.

ವೇದಿಕೆಯ ಮೇಲೆ ಪಾಂಡು ಬಿ.ಗೌಡ ಮಾಜಿ ಅಧ್ಯಕ್ಷರು ಗ್ರಾ.ಪಂ. ಭಾವಿಕೇರಿ, ಸುಕ್ರು.ಕೆ.ಗೌಡ ಗ್ರಾ.ಪಂ ಸದಸ್ಯರು ಭಾವಿಕೇರಿ,ಚಂದ್ರಹಾಸ ಗೌಡ ನಿವೃತ್ತ ಶಿಕ್ಷಕರು, ಸುಕ್ರು ರಾಜ ಗೌಡ ಪ್ರಕಾಶ ಆರ್ ನಾಯ್ಕ ನಿವೃತ್ತ ಶಿಕ್ಷಕರು,ಭಾರತಿ ಮತ್ತು ಏಕಾದಶಿ ಗೌಡ ನಿವೃತ್ತ ಶಿಕ್ಷಕರು, , ತುಳಸಿ ಗೌಡ ಮಾಜಿ ತಾ.ಪಂ.ಉಪಾಧ್ಯಕ್ಷರು ಅಂಕೋಲಾ, ವನಜಾಕ್ಷಿ ಸುಬ್ರಾಯ ಗೌಡ,ಮುಂತಾದವರು ಹಾಜರಿದ್ದರು.ಸುಪ್ರಿಯಾ ಗೌಡ ವಂದಿಸಿದರು.ಶಿಕ್ಷಕ ಗಣಪತಿ ಗೌಡ ನಿರೂಪಿಸಿದರು.