ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಅನೇಕ ಕಡೆ ನರಕಾಸುರನ ಪ್ರತಿಮೆಯನ್ನು ಮಾಡಿ ಮೆರವಣಿಗೆಯ ಮೂಲಕ ತಂದು ನಸುಕಿನ ಜಾವ ಸುಡುವ ಮೂಲಕ,ಅಭ್ಯಂಗ ಸ್ನಾನ ಮಾಡಿ ಈ ವರ್ಷದ ಬೆಳಕಿನ ಹಬ್ಬ ದೀಪಾವಳಿಯ ಹಬ್ಬದ ಸಂಭ್ರಮ ಆರಂಭವಾಯಿತು.

ರವಿವಾರ ಮಧ್ಯಾಹ್ನದಿಂದ ಪ್ರಾರಂಭವಾದ ಗುಡುಗು ಮಿಂಚಿನ ಸಹಿತ ಭಾರಿ ಮಳೆಯು ಮಧ್ಯ ರಾತ್ರಿಯ ತನಕ ಮುಂದುವರೆದ ಕಾರಣ ಸುರಿಯುವ ಮಳೆಯನ್ನು ಲೆಕ್ಕಿಸದೇ ಮೆರವಣಿಗೆಯಲ್ಲಿ ನರಕಾಸುರನನ್ನು ತಂದು ಸುಡಲಾಯಿತು.

ತಾಲೂಕಿನ ನಗರಬಾವಿಯಲ್ಲಿ ಎನ್.ಎಸ್.ಎಸ್ ಬಾಯ್ಸ್ ತಂಡದದವರು ಮಾಡಿದ ನರಕಾಸುರನನ್ನು ತಾಲೂಕಿನ ಕೇಂದ್ರ ಸ್ಥಾನದಲ್ಲಿ ಪ್ರಮುಖ ಬೀದಿಗಳಲ್ಲಿ ವೇಷ ಭೂಷಣಗಳ ಜೊತೆ ಕುಣಿದು ಕುಪ್ಪಳಿಸಿ ನಸುಕಿನ ಜಾವ ಸುಡಲಾಯಿತು. ಬೆಳಗಿವ ಜಾವ ಕುಟುಂಬದ ಸದಸ್ಯರೆಲ್ಲರೂ ಕೂಡಿ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆಯನ್ನು ತೊಟ್ಟು, ಕಾರಟ್ ಕಹಿಯನ್ನು ತಿಂದು ನಂತರ ವಿಧ,ವಿಧ ಮಾಡಿದ ಅವಲಕ್ಕಿ ಜೊತೆಗೆ ಇನ್ನಿತರ ಸಿಹಿ ತಿಂಡಿಯನ್ನು ತಿಂದರು.