ಸುದ್ದಿ ಕನ್ನಡ ವಾರ್ತೆ

ಅಂಕೋಲಾ:ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಸೊಂದು ವಡ್ಡಿ ಘಾಟ್ ತಿರುವಿನಲ್ಲಿ ಶನಿವಾರ ರಾತ್ರಿಯ ವೇಳೆ ಕಂದಕಕ್ಕೆ ಪಲ್ಟಿಯಾದ ಘಟನೆ ನಡೆದಿದೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು,ಚಾಲಕ,ನಿರ್ವಾಹಕ ಗಾಯಗೊಂಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಮಟಾ – ಶಿರಸಿ ರಸ್ತೆಯು ಅಗಲೀಕರಣ ಕಾಮಗಾರಿಯ ಕಾರಣ ಬಂದ ಮಾಡಲಾಗಿದ್ದು, ಶಿರಸಿಗೆ ಪ್ರಯಾಣಿಸುವ ಬಸ್ ಮಾರ್ಗವು ವಡ್ಡಿ ಘಾಟ್ ರಸ್ತೆಯ ಮಾರ್ಗವಾಗಿ ಪ್ರಯಾಣಿಸುತ್ತಾರೆ. ರಾಜ್ಯ ಹೆದ್ದಾರಿಯಾದರೂ ಘಟ್ಟದ ಪ್ರದೇಶದಲ್ಲಿ ಭಾರಿ ತಿರವುಗಳಿದ್ದು ಅಪಾಯಕಾರಿಯಾಗಿದೆ.

ಘಾಟ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಕಂದಕಕ್ಕೆ ಪಲ್ಟಿಯಾಗಿದೆ.ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು ಅದೃಷ್ಟವಶಾತ್ ಹೆಚ್ಚಿನ ಹಾನಿ ಆಗಿಲ್ಲ,ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಅಂಕೋಲಾ ಹಾಗೂ ಕುಮಟಾ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಕಂದಕಕ್ಕೆ ಪಲ್ಟಿಯಾದ ಬಸ್ ಕುಮಟಾ ಘಟಕಕ್ಕೆ ಸಂಬಂಧ ಪಟ್ಟಿದ್ದು ಬಳ್ಳಾರಿ ಕಡೆಯಿಂದ ಕುಮಟಾದತ್ತ ಪ್ರಯಾಣಿಸುತ್ತಿತ್ತು.ಸ್ಥಳಕ್ಕೆ ಅಂಕೋಲಾದ ಪೋಲಿಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.