ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಗಣೇಶಗುಡಿ ಯ
ಅವೇಡಾ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ಬರುವ ಅವೇಡ ಬಾಡಗುಂದ ಗಣೇಶ ಗುಡಿ ಇಳವಾ ಈ ನಾಲ್ಕು ಊರಿನ ಗಾಡಿಯವರು ಪ್ರವಾಸೋದ್ಯಮವನ್ನು ನಂಬಿ ರಾಪ್ಟಿಂಗ್ ಗಾಗಿ ಕೆಲವು ವರ್ಷಗಳಿಂದ ಗಾಡಿ ಸರ್ವಿಸ್ ನೀಡುತ್ತಿದ್ದೇವೆ .

ಈ ಹಿಂದೆ 3 ,4 ಸಲ ಗ್ರಾಮ್ ಪಂಚಾಯತ ಹಾಗೂ ಇಳವಾ ಗ್ರಾಮದಲ್ಲಿ ಜಟ್ಟಿ ಆಪರೇಟರ್ ಮತ್ತು ಓನರ್ ಜೊತೆ ಸಭೆ ನಡೆಸಿ ಸುಮಾರು 8 ವರ್ಷಗಳಿಂದ ಗಾಡಿ ಬಾಡಿಗೆ ದರ 300 ನಿಗದಿಪಡಿಸಿತ್ತು ಪ್ರತಿ ಟ್ರಿಪ್ ಗೆ ಆದರೆ ಈಗ ಬಾಡಿಗೆ ಹೆಚ್ಚಳ ನೀಡಲು ಮನವಿ ಮಾಡಿದರೆ 250 ರೂ ಕೊಡುತ್ತೇವೆ ಎಂದು ಹೇಳಿ ಕೆಲವು 15 ದಿವಸ ಗಾಡಿ ಪೇಮೆಂಟ್ ನಿಲ್ಲಿಸಿರುತ್ತಾರೆ ಈ ಹಿಂದೆ ಸಭೆಯಲ್ಲಿ ಒಂದು ಜಟ್ಟಿಗೇ ಒಂದು ಗಾಡಿ ಓನರ್ ಅಥವಾ ಆಪರೇಟರ್ ದ ಇರಬೇಕು ಎಂದು ಗ್ರಾಮ ಪಂಚಾಯತಿಯಲ್ಲಿ ಮತ್ತು ಇಳವಾ ಗ್ರಾಮದಲ್ಲಿ ಸಭೆ ನಡೆಸಿದಾಗ ಮಾತು ಕೊಟ್ಟಿದ್ದರು. ಆದರೆ ಈಗ ಕೆಲವು ಜಟ್ಟಿಗಳು ಮಾತ್ರ ಈ ಮಾತು ಪಾಲಿಸಿದ್ದಾರೆ ಕೆಲವು ಜಟ್ಟಿಗಲ್ಲಿ ಮೂರು ನಾಲ್ಕು ಗಾಡಿಗಳು ಜಟ್ಟಿ ಮಾಲೀಕರ ಆಪರೇಟರಗಳ ಮತ್ತು ಗೈಡ್ ಕೆಲಸ ಮಾಡುವವರ ಹೊರ ಊರಿನ ಗಾಡಿಗಳು ತಂದು ನಡೆಸುತ್ತಿದ್ದಾರೆ ಹಾಗಾಗಿ ಪೇಮೆಂಟ್ ಹೆಚ್ಚಳ ಬಗ್ಗೆ ಗ್ರಾಮ ಪಂಚಾಯಿತಿಗೆ 13/10/2025 ರಂದು ಮನವಿ ನೀಡಿದ್ದೇವೆ. ಆದರೆ ಜಟ್ಟಿ ಆಪರೇಟರ್ಗಳು ಪಂಚಾಯತಿಗೆ ಕರೆದರು ಬಂದು ಪಂಚಾಯತಿಯ ಮಾತಿಗೆ ಬೆಲೆ ಕೊಡದೆ ನಮ್ಮ ಮನವಿಯನ್ನು ಪೇಮೆಂಟ್ ಹೆಚ್ಚಳ ನೀಡಲು ಆಗುವುದಿಲ್ಲವೆಂದು ಹೇಳಿ ಹೋಗಿರುತ್ತಾರೆ.

ಈಗ ನಾವು ಕೆಲವು ಎಂಟು ದಿವಸದಿಂದ ಗಾಡಿಗಳು ನಿಲ್ಲಿಸಿ ಶಾಂತಿ ಹೋರಾಟ ಮಾಡುತ್ತಿದ್ದೇವೆ ಆದರೆ ನಮಗೆ ನ್ಯಾಯ ಸಿಕ್ಕಿಲ್ಲ ಆದ್ದರಿಂದ ಮಾಧ್ಯಮದ ಮೂಲಕ ನಮಗೆ ನ್ಯಾಯ ಸಿಗಲಿ ಎಂದು ಮನವಿ ಮಾಡುತ್ತೇವೆ. ಒಂದು ವೇಳೆ ನ್ಯಾಯ ಸಿಗಲಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ ಎಂದು ವಾಹನ ಮಾಲಿಕರಾದ
ಗೋವಿಂದ ಅರುಣ್ , ಪರಶುರಾಮ್ ,ದಶರಥ್
ನೀಲಕಂಠ ,ವಿಟ್ಟಲ , ಸಂತೋಷ್ ನಾಯಕ್,
ಕಿರಣ್ ,ರಮೇಶ್, ಅವಿನಾಶ್, ಸಾಗರ್, ಕಿರಣ್ s, ಶ್ರೀನಾಥ್, ಜಾವೇದ್, ಹುಸೇನ್ , ಲಾಲ್ ,ರಂಜಿತ್, ಈಶ್ವರ್ , ಕಿರಣ್ P . ನಾಸೀರ್, ಸಂತೋಷ್, ಸೂರಜ್ ಗ್ರಾಮ ಪಂಚಾಯತಗೆ ಮನವಿ ಮಾಡಿದ್ದಾರೆ.