ಸುದ್ದಿ ಕನ್ನಡ ವಾರ್ತೆ
ಜೋಯಿಡಾದ ಯರಮುಖ ದಲ್ಲಿ ಶ್ರೀ ಧನ್ವಂತರಿ ಜಯಂತಿ ಆರೋಗ್ಯ ಭಾರತಿ ಗುಂದ ಇವರು ರವಿವಾರ ದಿನ ಮದ್ಯಾಹ್ನ 3 30 ಕ್ಕೆ ಯರಮುಖ ದ ಸೇವಾ ಸಹಕಾರಿ ಸಂಘ ದ ಆವಾರ ದಲ್ಲಿ ಶ್ರೀಧನ್ವಂತರಿ ಜಯಂತಿ ಕಾರ್ಯಕ್ರಮ ನಡೆಸಲಿದ್ದಾರೆ,
ಆರೋಗ್ಯ ಭಾರತಿ ಯ ಗಣ್ಯರಾದ ಶಿರಸಿ ಯ ನಾಗೇಶ,ಪಿ,ಯವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಸ್ವರ್ಣವಲ್ಲಿ ಮಠದ. ಗುಂದ ಸೀಮೆಯ ಅಧ್ಯಕ್ಷರಾದ ದತ್ತಾತ್ರಯ ಟಿ ಹೆಗಡೆ, ಯೋಗಗುರು ಗಣೇಶ ವಿ ಹೆಗಡೆ ಮತ್ತು ನಾಟಿ ವೈದ್ಯರಾದ ಶ್ರೀಧರ ದೇಸಾಯಿ ಇವರು ಭಾಗವಹಿಸಲಿದ್ದಾರೆ. ಊರಿನ ಸಮಸ್ತ ಜನತೆ ಇದರ ಲಾಭ ಪಡೆಯ ಬೇಕೆಂದು, ಆರೋಗ್ಯ ಭಾರತಿಯ ಗುಂದ ಘಟಕದ ಪರವಾಗಿ ಶ್ರೀಮತಿ ಸೀತಾ ಸುಬ್ರಾಯ ದಾನಗೇರಿ ಮಾಹಿತಿ. ನೀಡಿರುತ್ತಾರೆ.
