ಸುದ್ದಿ ಕನ್ನಡ ವಾರ್ತೆ

ಜೋಯಿಡಾ 18 ಶನಿವಾರ ತಾಲೂಕಿನಲ್ಲಿ ದೀಪಗಳ ಹಬ್ಬದ ಮೆರಗು ತುಂಬಿಕೊಂಡಿದೆ. ಇಂದಿನಿಂದ ಒಂದು ವಾರಗಳ ಕಾಲ ಎಲ್ಲವೂ ದೀಪಾವಳಿ ಯ ಹಬ್ಬದ ವಿಶೇಷತೆ ಯಿಂದ ತುಂಬಿ ಬಲಿಂದ್ರ ನನ್ನು ಕಳಿಸುವ ವರೆಗೂ ಹಬ್ಬದ ಗಮ್ಮತ್ತು ಗಮನ ಸೆಳೆಯುತ್ತದೆ.

ನಾಳೆ ರವಿವಾರ ಗಂಗಾ ಪೂಜೆ ಯೊಂದಿಗೆ ನೀರು ತುಂಬುವ ಹಬ್ಬ, ಸೋಮವಾರ ನರಕ ಚತುರ್ದಶಿ ಮತ್ತು ಮಹಾಲಕ್ಷ್ಮಿ ಪೂಜೆ ನಡೆದರೆ ಮಂಗಳವಾರ ಅಮಾವಾಸ್ಯೆ ಪೂಜೆ ಲಕ್ಷ್ಮೀ ಪೂಜೆ ಗಳು ನಡೆಯುತ್ತವೆ, ಬುಧವಾರ ದೀಪಾವಳಿ ಪಾಡ್ಯ ಗೋಪೂಜೆ ಯ ವಿಶೇಷತೆ ಯಿಂದ ಗೋವು ಗಳಿಗೆ ಅಲಂಕರಿಸಿ ಪೂಜಿಸಿ, ಸಿಹಿ ಮೃಷ್ಟಾನ್ನ ವನ್ನು ನೀಡಿ ಪುನೀತ ರಾಗುತ್ತಾರೆ. ಅಳಿಯ ಮಗಳನ್ನು ಮನೇಗೆ ಕರೆದು ಉಡುಗೊರೆ ನೀಡಿ ಸಂಭ್ರಮಿಸುತ್ತಾರೆ. ಮನೆಯ ಹಿರಿಯರನ್ನು ಒಂದೆಡೆ ಸೇರಿಸಿ ಸಿಹಿ ಊಟ, ಹೋಳಿಗೆ ವಿವಿಧ ರೀತಿಯ ಅವಲಕ್ಕಿ ಮಾಡಿ ಊರು ಕೇರಿ ಯವರೆಲ್ಲ ತಿಂದು ಸಂಭ್ರಮಿಸುವ ಹಬ್ಬವೇ ಈ ದೀಪಾವಳಿ ಹಬ್ಬ.

ದೀಪಾವಳಿ ಹಬ್ಬಕ್ಕೆ ಹಳಿಯಾಳ ಜೋಯಿಡಾ. ಶಾಸಕರಾದ ಆರ್ ವಿ ದೇಶಪಾಂಡೆ ಯವರು ಕ್ಷೆತ್ರದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ದೀಪಾವಳಿ ಹಬ್ಬದ ನಂತರ ರೈತರ ಕೃಷಿ ಚಟುವಟಿಕೆಗಳು ವೇಗ ಪಡೆದು ಕೊಳ್ಳುತ್ತವೆ. ಇಂತ ಒಂದು ಹಬ್ಬದಲ್ಲಿ ಮೂರು ದಿನಗಳ ಕಾಲ ಮನೆ ಮಂದಿರ ಗಳಲ್ಲಿ ಬಲಿಂದ್ರನ ಪೂಜೆ ನಡೆಸುತ್ತಾರೆ ದುಷ್ಟ ಶಕ್ತಿಗಳು ದಮನ ವಾಗಲಿ ಎಂದು ಬೇಡಿಕೊಳ್ಳುತ್ತಾರೆ.

ಈ ಹಬ್ಬದ ಸಂಭ್ರಮದಲ್ಲಿ ಪುಟ್ಟ ಮಕ್ಕಳನ್ನು ಶೃಂಗರಿಸಿ ಹಬ್ಬದ ಗುಬ್ಬ ಎಂದು ಕರೆದು ಸಂಭ್ರಮಿಸುವ ದೀಪಾವಳಿ ನಾಡಿನ ದೇಶದ ಸಂಭ್ರಮದ ಹಬ್ಬ.ನಂದಿಗದ್ದಾ ಸೊಸೈಟಿಯ ಸೂಪರ್ ಮಾರ್ಕೆಟ್ ನಲ್ಲಿ ಹಬ್ಬದ ವ್ಯವಹಾರ ಜೋರಾಗಿಯೇ ನಡೆದಿದೆ, ಸ್ವತಃ ಅಧ್ಯಕ್ಷ ಆರ್ ವಿ. ದಾನಗೇರಿ ಮತ್ತು ವ್ಯವಸ್ಥಾಪಕ ಶಿವರಾಮ ದಬಗಾರ ಉಪಸ್ಥಿತರಿದ್ದು ವ್ಯವಹಾರ ನೋಡಿಕೊಳ್ಳುತ್ತಿದ್ಫು ಬರುವ ಸೋಮವಾರ ಸಂಘದಲ್ಲಿ ಲಕ್ಶ್ಮೀ ಪೂಜೆ ಇದ್ಫು ಎಲ್ಲರೂ ಬಂದು ಪ್ರಸಾದ ಸ್ವೀಕರಿಸಲು ಕೇಳಿಕೊಂಡಿದ್ದಾರೆ