ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ರಾಮನಗರ ಹಾಗೂ ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತದ ಗ್ರಾಮಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಹಬ್ಬದ ತಯಾರಿ ಜೋರು ನಡೆದಿದೆ.

ದೀಪಾವಳಿಯ ಹಬ್ಬದ ನಿಮಿತ್ತ ಪೂಜಾ ಸಾಮಗ್ರಿಯ ತಯಾರಿ,ದನಕರುಗಳಿಗೆ ಪೂಜೆಗೆ ಸಂಬಂಧಿಸಿದ ತಯಾರಿ,ಮಾತೆಯರು ಮನೆಯ ಆವರಣ,ಮನೆಯ ಒಳಗೆ ಸ್ವಚ್ಛಗೊಳಿಸುವುದು,ಅಲಂಕಾರ, ಅವಲಕ್ಕಿ, ಇನ್ನಿತರ ತಿಂಡಿ,ತಿನಿಸುಗಳನ್ನು ತಯಾರಿಸುವ ಕೆಲಸದಲ್ಲಿ ಅಕ್ಕಪಕ್ಕದ ಮನೆಯವರ ಜೊತೆ ಸೇರಿಕೊಂಡು ತಯಾರಿ ನಡೆಸಿದ್ದಾರೆ. ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ನರಕಾಸುರನ ಆಕ್ರತಿಯನ್ನು ಮಾಡಿ ಸುಡುವುದು,ಅವಲಕ್ಕಿ ಹಾಗೂ ಇನ್ನಿತರ ಸಿಹಿ ತಿಂಡಿಗಳನ್ನು ಪರಸ್ಪರ ಮನೆಗಳಿಗೆ ಹೋಗಿ ತಿನ್ನುವುದು,ಮನೆ,ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ,ಅಮಾವಾಸ್ಯೆಯ ಪೂಜೆ,ಗೋ ಪೂಜೆ,ಸಹೋದರ ಪೂಜೆ ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಹಬ್ಬವನ್ನು ಆಚರಿಸುತ್ತಾರೆ. ಗೋ ಪೂಜೆಯ ದಿನ ಕೊಟ್ಟಿಗೆ,ಗೋವನ್ನು ಹೂವುಗಳಿಂದ ಶೃಂಗರಿಸಿ,ಕೊರಳಿಗೆ ಅವಲಕ್ಕಿ,ತಿಂಡಿತಿನಿಸಿನ,ತೆಂಗಿನ ಕಾಯಿ ಇರುವ ಪೊಟ್ಟಣವನ್ನು ಕಟ್ಟುತ್ತಾರೆ.ಮನೆಯ ಮುಂದೆ ರಂಗೋಲಿಯ ಅಲಂಕಾರ,ಆಕಾಶ ಬುಟ್ಟಿ,ದೀಪಗಳ ಸಾಲು,ಸಾಲು ಅಲಂಕಾರ ಒಟ್ಟಿನಲ್ಲಿ ಒಂದು ವಾರಗಳ ಕಾಲ ದೀಪಾವಳಿಯ ಹಬ್ಬದ ವಾತಾವರಣ ಇರಲಿದೆ.