ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಕದ್ರಾ ವಲಯದ ಬೋರೆ ಗ್ರಾಮದ ಮನೆಯ ಆವರಣದ ಹಿತ್ತಲಿನಲ್ಲಿ ಕಟ್ಟಿ ಹಾಕಿದ ಎಮ್ಮೆ ಕರುಗಳ ಮೇಲೆ ತಡರಾತ್ರಿ ಚಿರತೆ ದಾಳಿ ಮಾಡಿದ್ದು,ಮೂರು ಎಮ್ಮೆ ಕರುಗಳನ್ನು ಕೊಂದು ಹಾಕಿದ ಘಟನೆ ಗುರುವಾರ ನಡೆದಿದೆ.

ಮನೆಯ ಆವರಣದ ಹಿತ್ತಲಿನಲ್ಲಿ ಕಟ್ಟಿದ ಎಮ್ಮೆ ಕರುಗಳ ಮೇಲೆ ಚಿರತೆ ದಾಳಿ ನಡೆಸಿ,ಮೂರು ಕರುಗಳನ್ನು ಕೊಂದು ಮಾಂಸವನ್ನು ತಿಂದಿದೆ. ಶುಕ್ರವಾರ ಬೆಳಗಿನ ಜಾವ ಕೊಟ್ಟಿಗೆಯ ಬಾಗಿಲು ತೆಗೆದಾಗ ರಕ್ತದ ಮಡುವಿನಲ್ಲಿ ಬಿದ್ದ ಎಮ್ಮೆ ಕರುಗಳನ್ನು ನೋಡಿ ಹೌಹಾರಿದ್ಡಾರೆ.ಒಂದು ಎಮ್ಮೆ ಕರುವಿನ ಹೊಟ್ಟೆಯ ಭಾಗವನ್ನು ಪೂರ್ತಿ ತಿಂದು ಹೋಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನು ನಡೆಸಿ,ಇದು ಚಿರತೆಯ ದಾಳಿಯಿಂದ ಘಟನೆ ನಡೆದಿದೆ ಎಂದು ದೃಡಪಡಿಸಿದ್ದಾರೆ.