ಸುದ್ದಿ ಕನ್ನಡ ವಾರ್ತೆ
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ಜೋಯಿಡಾ ಹಾಗೂ ಟಾಟಾ ಹಿಟಾಚಿ ಮಶೀನರಿ ಪ್ರವೇಟ್ ಲಿಮಿಟೆಡ್ ಧಾರವಾಡ ಇವರ ಸಂಯೋಗದೊಂದಿಗೆ ಒಂದು ತಿಂಗಳ ಉಚಿತ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜಗಲ್ಬೇಟ್ ದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪ್ರಶಾಂತ್ ದೀಕ್ಷಿತ್ ಸಿಎಸ್ಆರ್ ಹೆಡ್ ಟಾಟಾ ಹಿಟಾಚಿ ಮಶೀನರಿ ಪ್ರವೇಟ್ ಲಿಮಿಟೆಡ್ ಧಾರವಾಡ ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಈ ಹೊಲಿಗೆ ಉದ್ಯೋಗ ಒಂದು ಒಳ್ಳೆಯ ಉದ್ಯೋಗ , ಈ ಉದ್ಯೋಗದಿಂದ ಅನೇಕ ಕುಟುಂಬಗಳು ಈಗಲೂ ಬದುಕುತ್ತಾ ಇವೆ ಮತ್ತು ಒಳ್ಳೆಯ ಹೊಸ ವಿನ್ಯಾಸಗಳನ್ನು ಬಟ್ಟೆಯ ಮೇಲೆ ಬಿಡಿಸುವುದರಿಂದ ಬಹಳಷ್ಟು ಹಣ ಸಂಪಾದನೆ ಮಾಡಲು ಸಾಧ್ಯವೆಂದು ಇಂತಹ ತರಬೇತಿಗಳು ಗ್ರಾಮೀಣ ಮಟ್ಟದಲ್ಲಿ ಮಾಡುತ್ತಿರುವದು ಒಳ್ಳೆಯ ಉದ್ದೇಶ ಎಂದರು ಪ್ರಸಾದ್ ಶೆಟ್ಟಿ ಎಚ್ ಆರ್ ಮ್ಯಾನೇಜರ್ ಟಾಟಾ ಹಿಟಾಚಿ ಮಶೀನರಿ ಪ್ರವೇಟ್ ಲಿಮಿಟೆಡ್ ಧಾರವಾಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ್ ಬಡ್ಡಿ ನಿರ್ದೇಶಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಹಿಸಿದ್ದು ಸಂಸ್ಥೆಯ ತರಬೇತಿ ಕುರಿತು ಮಾತನಾಡಿದರು ಸುಹಾಸ್ ದೇಸಾಯಿ ಸದಸ್ಯರು ಗ್ರಾಮ ಪಂಚಾಯತ್ ಜಗಲ್ ಬೆಟ್ ಉಪಸ್ಥಿತರಿದ್ದರು ಪ್ರಾಸ್ತಾವಿಕವಾಗಿ ವಿನಾಯಕ ಚೌಹಾನ್ ಯೋಜನಾ ಸಯೋಜಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಇವರು ಒಂದು ತಿಂಗಳ ತರಬೇತಿಯಲ್ಲಿ ಕಲಿಸಿದ ವಿಷಯದ ಕುರಿತು ಮಾತನಾಡಿದರು ಕಾರ್ಯಕ್ರಮವನ್ನು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಆಯೋಜಿಸಿ ವಂದಿಸಿದರು.
