ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲೂಕು ಕೇಂದ್ರದ ಜೋಯಿಡಾ ಸೇವಾ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ದೇವಿದಾಸ ದೇಸಾಯಿ ಹಾಗೂ ಉಪಾಧ್ಯಕ್ಷರಾಗಿ ಭಾಲಚಂದ್ರ ಮಿರಾಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಈ ಸಹಕಾರಿ ಸಂಘ ದಲ್ಲಿ ಅವ್ಯವಹಾರ ನಡೆದಿದೆ ಎಂದು ಹಿಂದಿನ ಆಡಳಿತ ಮಂಡಳಿ ಯನ್ನು ಸೂಪರ್ ಸೀಡ್ ಮಾಡಲಾಗಿತ್ತು. ನಂತರ ಸಹಕಾರಿ ಇಲಾಖೆ ಚುನಾವಣೆ ನಡೆಸಿದ್ದು, ಎಲ್ಲ ಹನ್ನೊಂದು ಸದಸ್ಯರು ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ. ಈ ಸದಸ್ಯ ರೆಲ್ಲ ಸೇರಿ ದೇವಿದಾಸ ದೇಸಾಯಿ ಅವರನ್ನು ಅಧ್ಯಕ್ಷ ರನ್ನಾಗಿ ಮತ್ತು ಬಾಲಚಂದ್ರ ಮಿರಾಶಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಸದಸ್ಯರಲ್ಲಿ ಸಂತಸ ಮೂಡಿದೆ.