ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಸಪ್ತಸ್ವರ ಸೇವಾ ಸಂಸ್ಥೆಯವರು ತಾಳಮದ್ದಲೆ, ನಾಟಕ,ಯಕ್ಷಗಾನ ಕಲಿಕೆ,ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವ ಮೂಲಕ ಒಳ್ಳೇಯ ಕೆಲಸ ಮಾಡುತ್ತಿದ್ದಾರೆ ಎಂದು ಇಂದಿರೇಶ ಗೋಪಾಲ ದಾನಗೇರಿ ಗೋವಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅವರು ಯರಮುಖದಲ್ಲಿ ಸಪ್ತಸ್ವರ ಸೇವಾ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಯಕ್ಷಗಾನ ದಶಮಾನೋತ್ಸವ ಕಾರ್ಯಕ್ರಮದ ದಿವಂಗತ ಗೋಪಾಲ ದಾನಗೇರಿ ವೇದಿಕೆಯಲ್ಲಿ ಒಂಭತ್ತನೆಯ ದಿನದ ಉದ್ಘಾಟನಾ ಸಮಾರಂಭದ ದೀಪ ಪ್ರಜ್ವಲನ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯಕ್ಷಗಾನ, ತಾಳಮದ್ದಲೆ,ನಾಟಕ ವೀಕ್ಷಣೆಯ ಕುರಿತು, ತಮ್ಮ ತಂದೆಯವರು ತಾಳಮದ್ದಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನೆನಪಿಸಿದರು. ವೇದಿಕೆಯಲ್ಲಿ ಕೃಷ್ಣ ಹರಿಹರ ಭಟ್ಟ, ಶ್ರೀಪಾದ ಹೆಗಡೆ,ಶ್ರೀಪಾದ ಗಣೇಶ ದೇಸಾಯಿ,ರಾಮಚಂದ್ರ ದಾನಗೇರಿ, ರಾಧಾ ಹೆಗಡೆ,ಭಾವನಾ ಭಟ್ಟ ಇದ್ದರು.
ಈ ಸಂದರ್ಭದಲ್ಲಿ ಜಯಾನಂದ ಡೇರೆಕರ ಸಾಮಾಜಿಕ ಸಂಶೋಧನಾ ಕ್ಷೇತ್ರ ಹಾಗೂ ಪರಮೇಶ್ವರ ರಾಮಕೃಷ್ಣ ಹೆಗಡೆ ಯಕ್ಷಗಾನ ಕ್ಷೇತ್ರ ಸಪ್ತಸ್ವರ ಸೇವಾ ಸಂಸ್ಥೆಯ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಪದಾಧಿಕಾರಿಗಳು,ಭಾಗವತರಾದ ಆನಂದು ಆಗೇರ ಸಹಕಾರ ನೀಡಿದರು. ಕೃಷ್ಣ ಹರಿಹರ ಭಟ್ಟ ಕೊಳಲು ವಾದನ ನುಡಿಸಿದರು. ಕಾರ್ಯಕ್ರಮದ ಸ್ವಾಗತ, ನಿರೂಪಣೆ, ವಂದನಾರ್ಪಣೆಯನ್ನು ಪದ್ಮಶ್ರೀ ಭಟ್ಟ ನಡೆಸಿಕೊಟ್ಟರು.ನಂತರ ಕೀರ್ತಿ ಮಹಿಳಾ ಮಂಡಳದವರಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.