ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ರಂಗಮಂದಿರದಲ್ಲಿ ತಾಲೂಕಾ ಪಂಚಾಯತ ಜೋಯಿಡಾ (ಉತ್ತರಕನ್ನಡ),ಗ್ರಾಮ ಪಂಚಾಯತ ನಂದಿಗದ್ದೆ ಇವುಗಳ ಸಹಯೋಗದಲ್ಲಿ ಹರಿಪ್ರಿಯಾ ಸಂಜೀವಿನಿ ಗ್ರಾಮ ಪಂಚಾಯತ ಒಕ್ಕೂಟ (ರಿ)ಗ್ರಾಮ ಪಂಚಾಯತ ನಂದಿಗದ್ದೆ ಇವರ ಹತ್ತನೇ ವಾರ್ಷಿಕ ಸಾಮಾನ್ಯ ಸಭೆ – 2025, ಪಂಚಾಯತ ಮಟ್ಟದ ಸಾವಯವ ಉತ್ಪನ್ನ ಮೇಳ ಮತ್ತು ಉಚಿತ ಆರೋಗ್ಯ ಶಿಬಿರ ದಿನಾಂಕ:17 – 10 – 2025 ಬೆಳಿಗ್ಗೆ 10:30 ರಿಂದ ಸಂಜೆ 4:00 ರ ವರೆಗೆ ಸ್ಥಳ:ರಂಗಮಂದಿರ ನಂದಿಗದ್ದೆಯಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು, ಅಧ್ಯಕ್ಷರು ಹರಿಪ್ರಿಯಾ ಸಂಜೀವಿನಿ ಒಕ್ಕೂಟ ನಂದಿಗದ್ದೆ,ಗ್ರಾಮ ಪಂಚಾಯತ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರು,ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರು,ತಾಲೂಕಾ ವ್ಯವಸ್ಥಾಪಕರು,ವಲಯ ಮೇಲ್ವಿಚಾರಕರು,ಎನ್.ಆರ್.ಎಲ್.ಎಮ್ ತಾಲೂಕು ಪಂಚಾಯತ ಜೋಯಿಡಾ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ವ್ಯವಸ್ಥಾಪಕರು ಕರ್ನಾಟಕ ಗ್ರಾಮೀಣ ಬ್ಯಾಂಕ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಸಾವಯವ ಉತ್ಪನ್ನ ಮೇಳ,ಉಚಿತ ಆರೋಗ್ಯ ಶಿಬಿರ,ಸನ್ಮಾನ ಕಾರ್ಯಕ್ರಮ,ಉತ್ತಮ ಸಂಘಗಳಿಗೆ ಪ್ರಶಸ್ತಿ ವಿತರಣೆ(ಪ್ರಥಮ,ದ್ವಿತೀಯ ಹಾಗೂ ಸಮಾಧಾನಕರ ಬಹುಮಾನ). ಎಲ್ಲರೂ ಈ ಸಾವಯವ ಉತ್ಪನ್ನ ಮೇಳ ಹಾಗೂ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು,ಸ್ವಸಹಾಯ ಸಂಘಗಳನ್ನು ಪ್ರೋತ್ಸಾಹಿಸಬೇಕೆಂದು ಅಧ್ಯಕ್ಷರು ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ,ಸಂಘಗಳ ಸದಸ್ಯರು ಹರಿಪ್ರಿಯಾ ಸಂಜೀವಿನಿ ಗ್ರಾಮ ಪಂಚಾಯತ ಒಕ್ಕೂಟದವರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.