ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ,: ಪಟ್ಟಣದ ವಿಕಾಸ್ ಅರ್ಬನ್ ಬ್ಯಾಂಕಿನ ಎಪಿಎಂಸಿ ಆವಾರದಲ್ಲಿದ್ದ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ವೀಣಾ ಪೈ (55) ಫೆಬ್ರುವರಿ 14ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ಕಳೆದ ಸುಮಾರು 28 ವರ್ಷಗಳಿಂದ ವಿಕಾಸ್ ಅರ್ಬನ್ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಗ ದೂರದ ಹಟ್ಟಿ ಅಂಗಡಿಯಲ್ಲಿ 10ನೇ ತರಗತಿ ಓದುತ್ತಿದ್ದು, ಗಂಡ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿದ್ದಾರೆ.

ವೀಣಾ ಪೈ ರವರು ಅತ್ತೆ ಸೇರಿದಂತೆ ಸಹೋದರ, ಸಹೋದರಿ ,ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ವಿಕಾಸ್ ಅರ್ಬನ್ ಬ್ಯಾಂಕನ ಅಧ್ಯಕ್ಷರಾದ ಮುರಳಿ ಹೆಗಡೆ, ಎಲ್ಲ ನಿರ್ದೇಶಕರು ಹಾಗೂ ಬ್ಯಾಂಕಿನ ಎಲ್ಲ ಸಿಬ್ಬಂದಿಗಳು ವೀಣಾ ಪೈ ರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.