ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ 2025 – 26ನೇ ಸಾಲಿನ ವಿಶೇಷ ಗ್ರಾಮ ಸಭೆಯನ್ನು ನಂದಿಗದ್ದೆಯಲ್ಲಿ ನಾಳೆ ಕರೆದಿದೆ. ದಿನಾಂಕ 16 ಗುರುವಾರದಂದು ನಡೆಯುವ ಸಭೆಗೆ ಗ್ರಾಮ ಪಂಚಾಯತಕ್ಕೆ ಸಂಬಂಧ ಪಟ್ಟ ಎಂಟು ಗ್ರಾಮಗಳ ಸಾರ್ವಜನಿಕರು ಬಂದು ಸೂಕ್ತ ಸಲಹೆ ಮಾರ್ಗದರ್ಶನ ನೀಡಿ, ಸದುಪಯೋಗ ಪಡೆದು ಕೊಳ್ಳಲುತಿಳಿಸಲಾಗಿದೆ.ಚರ್ಚಿಸತಕ್ಕ ವಿಷಯಗಳು, 2026-27ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವದು ಮತ್ತು 2026-27ನೇ ಸಾಲಿನ ನರೇಗಾ ಯೋಜನೆಯ ಬೇಡಿಕೆ ಸಲ್ಲಿಸುವದು. ಅಧ್ಯಕ್ಷರ ಅನುಮತಿಯಿಂದ ಬರಬಹುದಾದ ಇತರ ವಿಷಯಗಳು, ಎಂದು ಗ್ರಾಮ ಪಂಚಾಯತ ಪ್ರಕಟಣೆ ತಿಳಿಸಿದೆ.