ಸುದ್ದಿ ಕನ್ನಡ ವಾರ್ತೆ
ಜೋಯಿಡಾ 15 ಅಕ್ಟೊಬರ್ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತವು 2025 26ನೇ ಸಾಲಿನ ವಿಶೇಷ ಗ್ರಾಮ ಸಭೆಯನ್ನು ನಂದಿಗದ್ದೆ ಯಲ್ಲಿ ನಾಳೆ ಕರೆದಿದೆ.
ದಿನಾಂಕ 16 ಗುರುವಾರ ದಂದು ನಡೆಯುವ ಸಭೆಗೆ ಗ್ರಾಮ ಪಂಚಾಯತಕ್ಕೆ ಸಂಬಂಧ ಪಟ್ಟ ಎಂಟು ಗ್ರಾಮಗಳ ಸಾರ್ವಜನಿಕರು ಬಂದು ಸೂಕ್ತ ಸಲಹೆ ಮಾರ್ಗದರ್ಶನ ನೀಡಿ, ಸದುಪಯೋಗ ಪಡೆದು ಕೊಳ್ಳಲುತಿಳಿಸಲಾಗಿದೆ.ಚರ್ಚಿಸತಕ್ಕ ವಿಷಯಗಳು, 2026-27ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವದು ಮತ್ತು 2026-27ನೇ ಸಾಲಿನ ನರೇಗಾ ಯೋಜನೆಯ ಬೇಡಿಕೆ ಸಲ್ಲಿಸುವದು. ಅಧ್ಯಕ್ಷರ ಅನುಮತಿಯಿಂದ ಬರಬಹುದಾದ ಇತರ ವಿಷಯಗಳು, ಎಂದು ಗ್ರಾಮ ಪಂಚಾಯತ ಪ್ರಕಟಣೆ ತಿಳಿಸಿದೆ.