ಸುದ್ದಿ ಕನ್ನಡ ವಾರ್ತೆ

ಕುಮಟಾ:ತಾಲೂಕಿನ ಅಲ್ಲಲ್ಲಿ ಸಂಜೆಯ ವೇಳೆ ಗುಡುಗು ಸಹಿತ ಮಳೆ ಆಗುತ್ತಿದ್ದು, ಅದರಂತೆ ತಾಲೂಕು ಆಡಳಿತ ಸೌಧಕ್ಕೆ ಸಿಡಿಲು ಬಡಿದ ಪರಿಣಾಮ ಕಟ್ಟಡದ ಮೇಲ್ಭಾಗದಲ್ಲಿ ಹಾನಿ ಆಗಿದೆ.

ಸಿಡಿಲು ಬಡಿದ ಪರಿಣಾಮ ಆಡಳಿತ ಸೌಧದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಅನಾಹುತ ಸಂಭವಿಸಲಿಲ್ಲ.

ತಾಲೂಕಿನ ಅಲ್ಲಲ್ಲಿ ಮನೆಗಳಿಗೆ ಹಾನಿ ಉಂಟಾಗಿದ್ದು ವಿದ್ಯುತ್ ವಾಹಕಗಳಿಗೆ ಹಾನಿ ಉಂಟಾದ ಪರಿಣಾಮ ಹೆಸ್ಕಾಂ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಮರು ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶುಭ್ರವಾದ ಆಕಾಶದಲ್ಲಿ ಆಕಸ್ಮಿಕ ಮೋಡ ಕವಿದು ಗುಡುಗು ಸಿಡಿಲು ಮಿಂಚಿನೊಂದಿಗೆ ಮಳೆ ಪ್ರಾರಂಭವಾದ ಪರಿಣಾಮ ತಮ್ಮ ದಿನನಿತ್ಯದ ಕೆಲಸಕ್ಕೆ ಆಗಮಿಸಿದ್ದ ಜನರು,ವಾಹನ ಸವಾರರು ತೊಂದರೆಯನ್ನು ಅನುಭವಿಸಿದರು.