ಸುದ್ದಿ ಕನ್ನಡ ವಾರ್ತೆ

ಜೋಯಿಡಾ 12 ತಾಲೂಕಿನ ಯರಮುಖ ದಲ್ಲಿ ನಡೆಯುತ್ತಿರುವ ಯಕ್ಷಗಾನ ದಶಮಾನೋತ್ಸವ ತುಂಬಾ ಚನ್ನಾಗಿ ನಡೆಯುತ್ತಿದೆ, ಎಂದು ವೇದಮೂರ್ತಿ ಪ್ರವೀಣ್ ಭಟ್ ಹೇಳಿದರು ಅವರು ಸಪ್ತ ಸ್ವರ ಸಂಸ್ಥೆ ಯವರುಯರಮುಖ ದಲ್ಲಿ ಹಮ್ಮಿಕೊಂಡ ಯಕ್ಷಗಾನ ದಶಮಾನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಳೆದ ಒಂಬತ್ತು ವರ್ಷ ಯಕ್ಷಗಾನ ಸಪ್ತಾಹದ ರೂಪದಲ್ಲಿ ನಡೆದು ಈ ವರ್ಷ ದಶಮಾನೋತ್ಸವ ವಾಗಿ ಆಚರಿಸುತ್ತಿದ್ದಾರೆ. ಜೊತೆಗೆ ಕಳೆದ ಇಪ್ಪತ್ತು ಮೂರು ವರ್ಷ ಗಳಿಂದ ಒಂದು ಕ್ಷೆತ್ರಕ್ಕೆ ಸೀಮಿತ ವಾಗದೇ ಈ ಸಂಸ್ಥೆ ವಿವಿಧ ಕ್ಷೆತ್ರ ಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕಾರ್ಯಕ್ರಮ ನಡೆಸುತ್ತಿದೆ. ಈ ವರ್ಷದ ಕಾರ್ಯಕ್ರಮದಲ್ಲಿ ವಿವಿಧ ಕ್ಷೆತ್ರ ಮತ್ತು ಯಕ್ಷಗಾನ ದಲ್ಲಿ ಸಾಧನೆ ಮಾಡಿದ ಹಿರಿಯ ದಿವಂಗತರ ಹೆಸರಿನಲ್ಲಿ ವೇದಿಕೆ ನಿರ್ಮಿಸಿ, ಅವರ ಸ್ಮರಣೆ ಮಾಡಿ ಅವಕಾಶ ನೀಡುತ್ತಿದ್ದಾರೆ, ಮೊದಲನೇ ದಿನದ ಕಾರ್ಯಕ್ರಮ ದಲ್ಲಿ ವೇದಮೂರ್ತಿ ರಾಮಕೃಷ್ಣ ಭಟ್ ಮತ್ತು ಸುಬ್ರಾಯ ಗಣಪತಿ ಶಂಕರಲಿಂಗ ಮಾಸ್ತರ ವೇದಿಕೆಯಲ್ಲಿ, ನಮ್ಮ ಮನೆ ಮಕ್ಕಳು ರಂಗ ಪ್ರವೇಶ ಮಾಡಿದ್ಫು ನನಗೆ ಸಂತಸ ತಂದಿದೆ. ರಾಮಕೃಷ್ಣ ಭಟ್ ಅವರು ನಮ್ಮ ದೊಡ್ಡಪ್ಪ ರಾಗಿದ್ದು, ವೇದಿಕೆಯಲ್ಲಿ ಅವರ ಬಾವಚಿತ್ರ ಇದ್ದು ನಮ್ಮ ಮನೆ ಮಕ್ಕಳನ್ನು ಅವರು ಅಲ್ಲಿಂದಲೇ ಹರಸಿದ್ದಾರೆ ಎಂಬ ಸಂತಸ ನಮಗಿದೆ ಎಂದು ಹೇಳಿದರು ….

… ಇದೇ ಸಂದರ್ಭದಲ್ಲಿ ರೈತ ಮಹಿಳೆ ತ್ರಿವೇಣಿ ಬಾಗ್ವತ ಮತ್ತು ಕೃಷ್ಣ ಆಗೇರ ಯಕ್ಷಗಾನ ಪಾತ್ರ ದಾರಿಗೆ ಗೌರವ ಸನ್ಮಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ಯುವ ಕಲಾವಿದ ಕೃಷ್ಣ ಆಗೇರ ಮಾತನಾಡಿ ಗುಂದ ದಂತ ಊರಿನಲ್ಲಿ ನನಗೆ ನೀಡಿದ ಸನ್ಮಾನ ನಿಜವಾಗಿ ನನಗೆ ಹೆಮ್ಮೆ ತಂದಿದೆ ಯಕ್ಷಗಾನ ಪಾತ್ರ ದಾರಿಗೆ ಪ್ರೇಕ್ಷಕರ ಚಪ್ಪಾಳೆಯೇ ಸನ್ಮಾನ ಹಾಗಾಗಿ ನಾನು ಈ ಕ್ಷೆತ್ರ ದಲ್ಲಿ ಮುಂದುವರಿಯಲು ನನ್ನನ್ನು ಪ್ರೋತ್ಸಾಹಿಸಿದಂತಾಗಿದೆ ಎಂದರು. .

ಶಿಕ್ಷಕಿ ಸುವರ್ಣಾ ಅಭಿಷೇಕ್, ಮಾತನಾಡಿ ನಾವು ಸಣ್ಣವರಿದ್ದಾಗ ಹಿಂದಿನ ಕಾಲದಲ್ಲಿ ಶಾಲೆ ಯಲ್ಲಿ ಗ್ಯಾದರಿಂಗ್, ಬೀದಿ ನಾಟಕ, ಯಕ್ಷಗಾನ ತಾಳ ಮದ್ದಳೆ ಗಳು ಹಳ್ಳಿಯಲ್ಲಿ ನಡೆ ಯುತ್ತಿದ್ದವು ಆದರೆ ಕ್ರಮೇಣ ಅವು ಕಡಿಮೆ ಆದರೂ ಇಂತ ಸಪ್ತಾಹಗಳು ಸಂತಸ ತಂದಿದೆ ಎಂದರು , ಕಾರ್ಯಕ್ರಮ ದ ಕುರಿತು ಟಿ ಕೆ ದೇಸಾಯಿ ಮಾತನಾಡಿದರು ಶಿವಪುರದ ಗೋಪಾಲ ಭಟ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮ ದ ಕಮಲಾಕರ ದೇಸಾಯಿ ವೇದಿಕೆಯಲ್ಲಿ ವಿ ಕೆ ದೇಸಾಯಿ ಸದಾಶಿವ ದೇಸಾಯಿ ಸುಬ್ರಮಣ್ಯ ಬಾಗವತ ಕೃಷ್ಣ ಗಾoವ್ಕಾರ್, ಇತರರು ಉಪಸ್ಥಿತರಿದ್ದರು ಕಾರ್ಯಕ್ರಮ ವನ್ನು ಲಾಸ್ಯ ಹೆಗಡೆ ನಡೆಸಿ ಕೊಟ್ಟರು ನಂತರ ಮಕ್ಕಳಿಂದ ರುಕ್ಮಿಣಿ ವಿವಾಹ ಯಕ್ಷಗಾನ ನಡೆಯಿತು.