ಸುದ್ದಿ ಕನ್ನಡ ವಾರ್ತೆ
ಹಳಿಯಾಳ:ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ )ವತಿಯಿಂದ ದಿನಾಂಕ 8-10-2025 ರಂದು ಪದಾಧಿಕಾರಿಗಳ ಸಭೆ ಹಾಗೂ ದಿನಾಂಕ 9-10 -2025 ರಂದು ಪದಾಧಿಕಾರಿಗಳ ಶಿಬಿರ ನಡೆದಿದ್ದು, ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳ ಸರ್ಕಾರಿ ಅರಣ್ಯ ಹಾಗೂ ಗೋಮಾಳ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ, ಎಲ್ಲಾ ಕುಟುಂಬಗಳಿಗೆ ಸಾಗುವಳಿ ಚೀಟಿ, ಪಟ್ಟಾ ,ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಹಾಗೂ ಕಾಡು ಪ್ರಾಣಿಗಳ ದಾಳಿಯಿಂದ ಆಗುವ ಬೆಳೆ ನಾಶಕ್ಕೆ ಸೂಕ್ತ ಬೆಳೆ ಪರಿಹಾರವನ್ನು ನೀಡುವಂತೆ, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು, ಶಸ್ತ್ರ ಚಿಕಿತ್ಸೆ, ಸ್ಕ್ಯಾನಿಂಗ್ ವ್ಯವಸ್ಥೆ ಹಳಿಯಾಳದಲ್ಲಿ ಆಗಬೇಕೆಂದು ಹಾಗೂ ಅನೇಕ ಬೇಡಿಕೆಗಳಿಗೆ ಆಗ್ರಹಿಸಿ 20 ದಿನಗಳ ಗಡುವು ನೀಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಹಾಗೂ ಸದರಿ ಸಭೆಯಲ್ಲಿ ವಿ,ಬಿ ರಾಮಚಂದ್ರರವರನ್ನು ರಾಜ್ಯದ ಉಪಾಧ್ಯಕ್ಷರನ್ನಾಗಿ ರಾಮಾಂಜನೇಯರವರನ್ನು ದಕ್ಷಿಣ ಕರ್ನಾಟಕದ ಅಧ್ಯಕ್ಷರನ್ನಾಗಿ, ಮಂಜುನಾಥ ಹಿರೇಮಣಿರವರನ್ನು ಉತ್ತರ ಕರ್ನಾಟಕ ಭಾಗದ ಅಧ್ಯಕ್ಷರನ್ನಾಗಿ ಹಾಗೂ ಕಾರವಾರ ,ಬೆಳಗಾವಿ, ಹುಬ್ಬಳ್ಳಿ, ಧಾರವಾಡ ,ಗದಗ, ಬಾಗಲಕೋಟೆ ,ಚಿತ್ರದುರ್ಗ ಜಿಲ್ಲೆಗಳ ಅಧ್ಯಕ್ಷರನ್ನು ಹಾಗೂ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಅವರಿಗೆ ಜವಾಬ್ದಾರಿ ಪತ್ರಗಳನ್ನು ನೀಡಲಾಯಿತು.

ಈ ಸಭೆಯಲ್ಲಿ ರಾಜ್ಯ ಸಮಿತಿ ವತಿಯಿಂದ ಡಾ. ಬಿ,ಆರ್ ಶ್ರೀನಿವಾಸರವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ಉಪಾಧ್ಯಕ್ಷರುಗಳಾದ ಸುಬ್ಬಣ್ಣ, ಸಿ .ಕೆ, ರವೀಂದ್ರನಾಥ್ವವಿ.ಬಿ ರಾಮಚಂದ್ರ ರಾಜ್ಯ ಕಾರ್ಯದರ್ಶಿಗಳಾದ ಡಿ.ವಿ. ವೀರಭದ್ರೇಗೌಡ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಂಜುನಾಥ ಹಿರೇಮಣಿ ಶರಣು ಅಂಗಡಿ ಕಾನೂನು ಸಲಹೆಗಾರರು ಉತ್ತರ ಕರ್ನಾಟಕ ವೆಂಕಟೇಶ್ ಮೇಸ್ತ್ರಿ ಉಪಾಧ್ಯಕ್ಷರು ಉತ್ತರ ಕರ್ನಾಟಕ ಸೂರ್ಯ ಪ್ರಕಾಶ ಉಪಾಧ್ಯಕ್ಷರು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಅಧ್ಯಕ್ಷರಾದ ರಾಮಾಂಜನೇಯ, ಬೆಂಗಳೂರು ವಿಭಾಗೀಯ ಅಧ್ಯಕ್ಷರಾದ ರವಿ ಸುರದೇನುಪುರ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.