ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಯಕ್ಷಗಾನ ದಶಮಾನೋತ್ಸವ ದಂತ ಸಂಘಟನೆ ತುಂಬಾ ಕಷ್ಟ ಆದರೆ ಇಲ್ಲಿ ಯಕ್ಷಗಾನ ಕೇವಲ ಪ್ರದರ್ಶನ ಕ್ಕಾಗಿ ಅಷ್ಟೇ ಇದೆ. ಮೂಲ ಮತ್ತು ಶಾಸ್ತ್ರೀಯ ವಾಗಿ ಇರಬೇಕಾಗಿತ್ತು ಎಂದು, ಯಕ್ಸಗಾನ ಕಲಾವಿದ ಎನ್ ವಿ ಹೆಗಡೆ ಹೇಳಿದರು .
ಅವರು ತಾಲೂಕಿನ ಯರಮುಖ ದಲ್ಲಿ ನಡೆಯುತ್ತಿರುವ ಯಕ್ಷಗಾನ ದಶಮಾನೋತ್ಸವದ, ದಿವಂಗತ ವಿ ಎನ್ ಹೆಗಡೆ ವೇದಿಕೆಯಲ್ಲಿ ನಾಲ್ಕನೇ ದಿನದ ಕಾರ್ಯಕ್ರಮ, ಉದ್ಘಾಟಿಸಿ ಮಾತನಾಡುತ್ತಿದ್ದರು. ಯಕ್ಷಗಾನ ದಲ್ಲಿ ಶಾಸ್ತ್ರೀಯ ವಾಗಿ ತಾಳಗಳ ಜ್ಞಾನ ವಿರಬೇಕು. ಇರುವ ಏಳು ತಾಳಗಳಲ್ಲಿ ಯಾವ ತಾಳಕ್ಕೆ ಏನು ಮಾಡಬೇಕು ಎಂದು ತಿಳಿದಿರ ಬೇಕು. ಭಾಗವತರು ಪದ್ಯ ಹೇಳಿದಾಗ ಇದೇ ತಾಳದಲ್ಲಿ ಹೋಗಬೇಕು ಎಂದು ಪಾತ್ರದಾರಿಗೆ ತಿಳಿದಿರಬೇಕು. ಒಂದು ಪದ್ಯ ವನ್ನು , ಒಂದು ರಾಗದಲ್ಲಿ ಹಾಡಿದಾಗ ಇಂತದ್ದೇ ತಾಳ ಎಂದು ಪಾತ್ರದಾರಿಗೆ ತಿಳಿಯಬೇಕು. ಕಲಿಸುವಾಗ ಐದು ಮುಖ್ಯ ತಾಳಗಳ ತಿಳುವಳಿಕೆ ಬೇಕು, ಜಂಪೆ ತಾಳದ ಗತ್ತು ಸ್ವಲ್ಪ ಕಷ್ಟ, ಆದರೆ ತಿಳುವಳಿಕೆ ಮುಖ್ಯ. ಕೌರವ, ಕೃಷ್ಣ, ರುಕ್ಮಿಣಿ, ಪಾತ್ರ ಮಾಡಿದವರೆಲ್ಲ ಒಂದೇ ತಾಳದಲ್ಲಿ ಕುಣಿದರೆ ಯಕ್ಷಗಾನ ಆಗುವುದಿಲ್ಲ. ಇದೆಲ್ಲ ಪ್ರಡರ್ಶನಕ್ಕೆ ಮಾತ್ರ ಆಗುತ್ತದೆ. ಆಯಾ ಪಾತ್ರದ ಕಲ್ಪನೆ ಇರಬೇಕು ಸಮಗ್ರ ಕಂಸ ದಲ್ಲಿ ಬರುವ ಪ್ರಾರಂಭದ ಕಂಸ, ಸೌಂದರ್ಯ ಕಂಸ ಮತ್ತು ಕೊನೆಯ ಕಂಸ ಎಲ್ಲರೂ ಒಂದೇ ತಾಳ ದಲ್ಲಿ ಕುಣಿದರೆ ಎಷ್ಟು ಸರಿ? ಯಕ್ಷಗಾನ ದಲ್ಲಿ ಬರುವ.ಮೂವತ್ತಾರು ರಾಗಗಳಲ್ಲಿ, ಮಾಲಕಂಸ ಮತ್ತು ನಿಲಾಂಬರಿ, ರಾಗಗಳು ಕೇಳಲು ಇಂಪು ಇದಕ್ಕೆ ರಕ್ಕಸರ ಹಾಗೇ ಕಲಾವಿದರು ಕುಣಿದರೆ ಸರಿಯಾದೀತೇ?, ಪದ್ಯಕ್ಕೆ ಹೀಗೇ ಕುಣಿಯಬೇಕು, ಎಂಬ ಮಾರ್ಗದರ್ಶನ ವಿದ್ದರೆ ಅದು ಯಕ್ಷಗಾನ ವಾಗುತ್ತದೆ, ಭಾಗವತರು ಹಾಡಿದ ಹಾಡನ್ನು ಕೇಳಿದಾಕ್ಷಣ ನೋಡುಗನು ಆ ಸನ್ನಿವೇಷಕ್ಕೆ ಮನಸ್ಸಿನಲ್ಲಿಯೇ ಬಂದಿರಬೇಕು, ಆ ಲೋಕಕ್ಕೆ ಹೋಗಲು ಯಕ್ಷಗಾನ ದಲ್ಲಿ ಮಾತ್ರ ಸಾಧ್ಯ ಎಂದು ಯಕ್ಷಗಾನ ದ ಹಲವು ವಿವರ ಗಳನ್ನು ತಿಳಿಸಿದರು,, ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದು, ತಾವು ಕಲಾವಿದ ಗೋವಿಂದ ನಾಯಕ ರಿಂದ ಕಲಿತ ದಿನಗಳನ್ನು ಸ್ಮರಿಸಿದರು, ಕಾರ್ಯಕ್ರಮದ ಅಧ್ಯಕ್ಷ ತೆ ಯನ್ನು ಅಮರಾ ದ ಮಂಗಲಾ ಹೆಗಡೆ ವಹಿಸಿದ್ದರು. ನಂತರ ಈಶ್ವರ ನಾಯಕ ಸಂಗಡಿಗರಿಂದ ಚಂದ್ರಾವಳಿ ವಿಲಾಸ ಎಂಬ ಯಕ್ಷಗಾನ ನಡೆಯಿತು.