ಸುದ್ದಿ ಕನ್ನಡ ವಾರ್ತೆ

ಶಿರಸಿಯಲ್ಲಿ ಜಿ.ಎಸ್.ಟಿ ಉಳಿಕೆ ಉತ್ಸವ ವಿಚಾರ ಸಂಕಿರಣ. ಶಿರಸಿ: ದಿನಾಂಕ 13.10.2025 ರ ಸೋಮವಾರ ಬೆಳಿಗ್ಗೆ 10:30ಕ್ಕೆ ಶಿರಸಿಯ ಪೂಗಭವನದಲ್ಲಿ (ಎಪಿಎಂಸಿ) ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜಿ.ಎಸ್.ಟಿ ಉಳಿಕೆ ಉತ್ಸವ – ವಿಚಾರ ಸಂಕಿರಣವು ಜಿಲ್ಲಾಧ್ಯಕ್ಷರಾದ ಶ್ರೀ ಎನ್ ಎಸ್ ಹೆಗಡೆ ಕರ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾಗೂ ಜಿಲ್ಲೆಯ ಪ್ರಮುಖರು ಉಪಸ್ಥಿತರಿರುವರು.

ಸಿ.ಎ ಹಾಗೂ ಬಿಜೆಪಿ ಕರ್ನಾಟಕ – ಆರ್ಥಿಕ ಪ್ರಕೋಷ್ಠದ ಮಾಜಿ ರಾಜ್ಯ ಸಂಚಾಲಕರಾದ ಶ್ರೀ ಎಸ್ ವಿಶ್ವನಾಥ ಭಟ್ ಅವರು ಪಾಲ್ಗೊಂಡು ಜಿಎಸ್‌ಟಿ ಉಳಿತಾಯದ ಕುರಿತು ಮಾತನಾಡುವರು.

ಗ್ರಾಹಕರು,ವರ್ತಕರು ಹಾಗೂ ಸಾರ್ವಜನಿಕರು, ಪ್ರಮುಖರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ವಿಚಾರ ಸಂಕಿರಣದ ಪ್ರಯೋಜನವನ್ನು ಪಡೆದುಕೊಳ್ಳಲು ಸಂಘಟಕರು ವಿನಂತಿಸಿದ್ದಾರೆ.