ಸುದ್ದಿ ಕನ್ನಡ ವಾರ್ತೆ

2025-26 ನೇ ಸಾಲಿನಲ್ಲಿ ಜೋಯಿಡಾ ತಾಲೂಕನ್ನು ಸಾವಯವ ತಾಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮ ಮತ್ತು ಅತ್ಮಯೋಜನೆಯಡಿ ಎರಡು ದಿನ ಜೋಯಿಡಾ ತಾಲೂಕಿನ ಕಾತೇಲಿ, ಜೋಯಿಡಾ, ಉಳವಿ, ಜಗಲಬೇಟ, ರಾಮನಗರ, ಪ್ರದಾನಿ ಯಲ್ಲಿ ಶ್ರೀ ಬಂಟದೇವ ಯುವಕ ಸಂಘ, ಅಮದಳ್ಳಿ, ಕಾರವಾರ ಕಲಾ ತಂಡದಿಂದ ಬೀದಿ ನಾಟಕದ ಮೂಲಕ ರೖತ ಭಾಂದವರಿಗೆ ಸಾವಯವ ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ಧೇಶಕರಾದ ಶ್ರೀಮತಿ. ವೀಣಾ ಬೀಡಿಕರ, ಕೃಷಿ ಇಲಾಖೆಯ ಅಧಿಕಾರಿಗಳಾದ ಇಬ್ರಾಹಿಂ ಕಲ್ಮಂಗಿ, ಸುದರ್ಶನ್ ಎಮ್ , ಮದನಮೋಹನ ಹಂಜಗಿ, ಆಕಾಶ ಶಿಂಧೆ, ತಿಮ್ಮೆಶ್ ಉಪಸ್ಥಿತರಿದ್ದರು. ಕಲಾ ತಂಡ ಹೋದಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ.