ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಜಿಲ್ಲೆಯ ಪ್ರತಿಷ್ಠಿತ ಕೆ ಡಿ ಸಿ. ಸಿ ಬ್ಯಾಂಕ ಶಿರಸಿ ಯ ಚುನಾವಣೆ ಘೋಷಣೆ ಮಾಡಲಾಗಿದೆ.
ಬ್ಯಾಂಕ ನ ಆಡಳಿತ ಮಂಡಳಿಗೆ ಈ ಹಿಂದೆ ಜೋಯಿಡಾ ದ ಪ್ರತಿನಿದಿಯಾಗಿ ಪಣಸೋಲಿ ಯ ಕೃಷ್ಣಾ ದೇಸಾಯಿ, ಆಯ್ಕೆ ಆಗಿದ್ದರು.ಈಗ ಅವರ ಎದುರಾಳಿ ಕುಂಬಾರ ವಾಡದ ಪುರುಷೋತ್ತಮ ಕಾಮತ (ಮಂಗೇಶ್ )ಎಂದು ತಿಳಿದು ಬಂದಿದೆ ಇಬ್ಬರೂ ಗುತ್ತಿಗೆ ದಾರರುಮತ್ತು ಅವರ ಬಗ್ಗೆ ತಾಲೂಕಿನ ಜನತೆಗೆ ಸಾಕಷ್ಟು ಪರಿಚಯ ವಿದೆ. ಕೃಷ್ಣಾ ದೇಸಾಯಿಅವರುತಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಲಿಲ್ಲ ಎಂಬ ಮಾತಿದೆ, ತಾಲೂಕಿನ ನಂದಿಗದ್ದೆ ಸೇವಾ ಸಹಕಾರಿ ಸಂಘ ದ ಸದಸ್ಯರು ಬೆಳೆಸಾಲ ಪಡೆಯಲು 40 ಕಿ ಮೀ ದೂರದ ದಾಂಡೇಲಿ ಶಾಖೆಗೆ, ಹೋಗಬೇಕು, ಉಳವಿ ಅಥವಾ ಗುಂದ ದಲ್ಲಿ ಕೆ ಡಿ ಸಿ ಸಿ ಬ್ಯಾಂಕ್ ನ ಶಾಖೆ ತೆರೆದರೆ ಸಾವಿರಾರು ರೈತರಿಗೆ ಅನುಕೂಲ ವಾಗುತ್ತಿತ್ತು ಎಂಬ ಮಾತು ಕೇಳಿ ಬಂದಿದೆ. ಈ ಪ್ರದೇಶ ದಲ್ಲಿ ಸಾಕಷ್ಟು ಸಹಕಾರಿ ಗಳಿದ್ದರೂ ಯಾರೂ ಈ ಬಗ್ಗೆ ಪ್ರೇಯತ್ನಿಸದೆ ಇರುವ ಕಾರಣ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಪ್ರತಿಸ್ಪರ್ದಿ ಪುರುಷೋತ್ತಮ ಕಾಮತರು ರಾಜಕೀಯ ನಿಪುಣರು. ಅವರಿಗೆ ಮೊದಲ ಬಾರಿಗೆ ಸಿಕ್ಕ ಈ ಅವಕಾಶ ವನ್ನು ಸರಿಯಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಕಾಮತ ರದು. ತಾಲೂಕಿನ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ರಾಗಿರುವ ಕಾಮತ ರಿಗೆ ಆರ್ ವಿ ದೇಶಪಾಂಡೆ ಅವರ ಬೆಂಬಲ ವಿದೆ, ಎನ್ನಲಾಗುತ್ತಿದೆ. ಶಿವರಾಮ ಹೆಬ್ಬಾರರ ಬೆಂಬಲ ದಿಂದ ಕಳೆದ ಎರಡು ಅವಧಿಯಲ್ಲಿ ಬ್ಯಾಂಕ ನಿರ್ದೇಶಕ ರಾಗಿ ಕೃಷ್ಣಾ ದೇಸಾಯಿ ಪಳಗಿದ್ದು, ಈಗಲೂ ಮತ್ತೆ ಆಯ್ಕೆ ಆಗುವ ಕಸರತ್ತು ನಡೆಸಿದ್ದಾರೆ.
ತಾಲೂಕಿನಲ್ಲಿ ಸಮಬಲದ ಹೋರಾಟ ಇದ್ದು ಯಾರೇ ಆಯ್ಕೆ ಆದರೂ ಒಂದು ಮತದ ದಿಂದ ಆಯ್ಕೆ ಆಗುವ ಲಕ್ಷಣ ಗಳಿವೆ ಎನ್ನಲಾಗುತ್ತಿದೆ. ಸರಕಾರದ ಜಾತಿ ರಾಜಕಾರಣ ಕೆಲಸ ಮಾಡಿದರೆ ಕೃಷ್ಣಾ ದೇಸಾಯಿ ಆಯ್ಕೆ ಗ್ಯಾರಂಟಿ, ಆ ಮೂಲಕ ತಾಲೂಕಿನ ಗ್ಯಾರಂಟಿ ಅಧ್ಯಕ್ಷರಿಗೆ ಹಿನ್ನಡೆಆಗಲೂಬಹುದುಎಂದುಹೇಳಲಾಗುತ್ತಿದೆ ಒಟ್ಟಾರೆ ತುರುಸಿನ ಆಟಕ್ಕೆ ಸಾಕಷ್ಟು ಏಣಿಕೆ ಆಟ ಕೂಡ ನಡೆದಿದ್ದು, ನಿರೀಕ್ಷೆ ಇಲ್ಲದೇ ಕೆಲವರ ಜೇಬು ತುಂಬಿದ್ದು ಮಾತ್ರ ಸುಳ್ಳಲ್ಲ, ಎಂದು ಬಲ್ಲವರು, ಹೇಳುತ್ತಿರುವದು ಸತ್ಯ ವಂತೆ.