ಸುದ್ದಿ ಕನ್ನಡ ವಾರ್ತೆ

ಜೊಯಿಡಾ : ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡಿ ಕಿಡಿ ಕಾರಿದ್ದಾರೆ. ತಹಶಿಲ್ದಾರ ಮಧ್ಯಸ್ಥಿಕೆ ವಹಿಸಿ ಅಕ್ಟೋಬರ್ 30 ಒಳಗೆ ಜನಪ್ರತಿನಿಧಿಗಳು,ಅರಣ್ಯ ಅಧಿಕಾರಿಗಳು ಹಾಗೂ ಹೋರಾಟಗಾರ ಸಭೆ ಕರೆಯುವ ಭರವಸೆಯೊಂದಿಗೆ ಮನವಿ ಸ್ವೀಕರಿಸಿ ತಾತ್ಕಾಲಿಕ ಹೋರಾಟ ಹಿಂದೆ ಪಡೆಯಲಾಯಿತು.

ಜಿಲ್ಲಾ ಹಾಗೂ ತಾಲೂಕು ಕುಣಬಿ ಸಮಾಜ ಮತ್ತು ತಾಲೂಕಿನ ಎಲ್ಲ ಸಮಾಜದ ಮುಂದಾಳತ್ವದಲ್ಲಿ ಅರಣ್ಯ ಇಲಾಖೆ ದೌರ್ಜನ್ಯ ಹಾಗೂ ಪ್ಯಾಕೇಜ್ ಹಣದಲ್ಲಿ 152 ಕೋಟಿ ರೂಪಾಯಿ ಹಣ ಹಗರಣದ ತನಿಖೆ ಒತ್ತಾಯಿಸಿ ಕುಂಬಾರವಾಡಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕುಣಬಿ ಸಮಾಜ ಜಿಲ್ಲಾ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ ಈ ಜಂಗಲ, ಜಮಿನ, ನದಿಗಳು, ಸ್ಥಳಿಯ ಜನರ ಹಕ್ಕು, ಇದನ್ನು ಮೊಟಕು ಮಾಡುವ ಹುನ್ನಾರ ನಡೆಯುತ್ತಿದೆ. ಪರಿಸರ ಸಂರಕ್ಷಣೆ ಸ್ಥಳಿಯರ ರಕ್ತದಲ್ಲಿದೆ. ಸರ್ಕಾರದ ಹಣ ರೂ. 152 ಕೋಟಿ ಪ್ಯಾಕೇಜ್ ಹಣ ದುರುಪಯೋಗ ಆದ ಬಗ್ಗೆ ಸಂಶಯ ಇದೆ. 2003 ಕಾಯಿದೆ ಅಡಿಯಲ್ಲಿ ಕುಮರಿ, ಹಕ್ಕಲ, ಪಟ್ಟಾ, ಗೋಮಾಳ, ಆತೊ, ಜಮಿನು ಅರಣ್ಯ ಇಲಾಖೆ ಗೆ ಸಂಬಂಧಿಸಿಲ್ಲ ಎಂದು ಹೇಳಿದೆ. ನಮ್ಮ ಹಕ್ಕು , ಕರ್ತವ್ಯಗಳು ನಾವು ತಿಳಿದು ಸಾಂಘಿಕ ಹೋರಾಟ ರೂಪಿಸಬೇಕು ಎಂದು ಹೇಳಿದರು.

ಹೋರಾಟಗಾರ ದತ್ತಾರಾಮ ದೇಸಾಯಿ ಮಾತನಾಡಿ ಅಣಶಿ ನ್ಯಾಸನಲ್ ಪಾರ್ಕ 2003 ನೊಟಿಪಿಕೆಶನ್ ಆಗಿದೆ. ನಮ್ಮ ಹಕ್ಕು ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಬಿಎಸ್ ಎನ್ ಎಲ್ ಟವರಗೆ ಸಂಪರ್ಕ ನೀಡಲು ತೊಂದರೆ ನೀಡುವುದು ಸರಿಯಲ್ಲ ಎಂದರು.

ಕೃಷಿ ಸಮಾಜದ ಗೋಪಾಲ ಭಟ್ ಮಾತನಾಡಿ ಅರಣ್ಯ ಹಕ್ಕು ಕಾಯ್ದೆಯ ಸಾಮುದಾಯಿಕ ಹಕ್ಕು ಜಾರಿ ಮಾಡಿದರೆ ಇಲ್ಲಿ ಅರಣ್ಯ ಇಲಾಖೆಯೇ ಇರುವುದಿಲ್ಲ, ಕಾನೂನು ಜನರ ಪರವಾಗಿದೆ ಹಕ್ಕು ಕೇಳಿ ಪಡೆಯಬೇಕು. ಜನ ಪ್ರತಿನಿಧಿಗಳು ಜನರ ಪರವಾಗಿ ಕಾನೂನು ರೂಪಿಸಬೇಕು ಎಂದರು.

ಪ್ರಮುಖರಾದ ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ರವಿ ರೆಡಕರ, ಗ್ರಾಮ ಪಂಚಾಯತ್ ಸದಸ್ಯ ಸುಬ್ರಾಯ ಭಟ್, ಮಾಬಳು ಕುಂಡಲಕರ, ರಪಿಕ್ ಖಾಜಿ ಮುಂತಾದವರು ನಾಯಕತ್ವ, ಸಂಘಟನೆ, ಅರಣ್ಯ ಅಧಿಕಾರಿಗಳ ದೌರ್ಜನ್ಯ, ಕಾನೂನಿನ ಬಗ್ಗೆ ವಿವರಿಸಿದರು.

ತಾಲೂಕಿನ ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಾಸಿಸುವ ಮೂಲನಿವಾಸಿಗಳಿಗೆ ಅಧಿಕಾರಿಗಳು ಒಂದಿಲ್ಲೊಂದು ನೆಪದಲ್ಲಿ ತೊಂದರೆ ನೀಡಿ ಜನರನ್ನು ಕಾಡಿನಿಂದ ಹೊರಗೆ ಹಾಕುವ ಹುನ್ನಾರ ಮಾಡಲಾಗುತ್ತದೆ. ಕರಡಿ, ಹುಲಿ ತಂದು ಬಿಟ್ಟು ಜನರಲ್ಲಿ ಭಯ ಹುಟ್ಟಿಸಿ ಕಾಡಿನಿಂದ ಹೊರಗೆ ಹಾಕುವ ಹುನ್ನಾರ ಎಂದು ತರಾಟೆಗೆ ತೆಗೆದುಕೊಂಡರು.

 

ತಾಲೂಕು ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಳಿಪ, ಮರಾಠಾ ಸಮಾಜ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ರವಿ ರೆಡಕರ, ವಿನಯ ದೇಸಾಯಿ, ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವಿಣ ದೇಸಾಯಿ, ಸುಭಾಷ ಮಾಂಜ್ರೇಕರ, ಸದಸ್ಯರಾದ ಸುಬ್ರಾಯ ಭಟ್, ಆಕಾಶ ಅನಸ್ಕರ, ಶಾಂತಾರಾಮ್ ಕಾಮತ್, ಸಾಲು ಡಾಯಸ್, ರೂಪೇಶ್ ದೇಸಾಯಿ, ರಫಿಕ್ ಖಾಜಿ, ಮಾಬಳು ಕುಂಡಲಕದ, ಅರುಣ ಕಾಮರೆಕರ, ವಿವೇಕ ಮೋರೆ ಕೃಷಿ ಸಮಾಜ ಅಧ್ಯಕ್ಷ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಮಾಳು ಸೋಲೆಕರ, ಸುಭಾಷ ವೇಳಿಪ, ಪ್ರಸನ್ನ ಗಾವಡಾ, ದೇವಿದಾಸ ದೇಸಾಯಿ, ರಾಮಕೃಷ್ಣ ಪೆr ಡ್ನೇಕರ, ತುಕಾರಾಮ ವೇಳಿಪ, ಮಾಹೇಶ್ವರ ಕಾಜುಗಾರ, ಕೃಷ್ಣ ದೇಸಾಯಿ, ಬುಧೊ ಕಾಲೇಕರ ಮುಂತಾದವರು ಇದ್ದರು.
ಸಾರ್ವಜನಿಕ ರು ತಹಶೀಲ್ದಾರ್ ಮಂಜುನಾಥ್ ಮುನ್ನೊಳ್ಳಿ ಮತ್ತು ಎ ಸಿ ಎಪ್ ಗಿರೀಶ ಸಂಕ್ರಿ ಮೂಲಕ ಮನವಿ ಅರ್ಪಿಸಿದರು.