ಸುದ್ದಿ ಕನ್ನಡ ವಾರ್ತೆ

ಜೋಯಿಡಾ ರಾಜ್ಯಾದ್ಯಂತ ಗಣತಿದಾರರು ಮನೆಮನೆಗೆ ಹೋಗಿ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದರೇ ನಮ್ಮ ಜೋಯಿಡಾ ತಾಲ್ಲೂಕಿನ ಅನೇಕ ಭಾಗಗಳಲ್ಲಿ ಜನರೇ ಗ್ರಾಮ ಪಂಚಾಯತ್ ಕೇಂದ್ರಕ್ಕೆ ಬಂದು ಮಾಹಿತಿಯನ್ನು ನೀಡಬೇಕಾದ ಅನಿವಾರ್ಯತೆ ಉಂಟುಮಾಡಲಾಗಿದೆ.

ತಮ್ಮ ಕುಟುಂಬ ನಿರ್ವಹಣೆಗೆ ಸಣ್ಣ ಪುಟ್ಟ ಕೆಲಸಗಳಿಗೆ ನೆರೆಯ ಗೋವಾ ಕ್ಕೆ ಹೋದ ಕುಟುಂಬ ಮುಖ್ಯಸ್ಥರಿಗೆ ಈ ಜಾತಿ ಸಮೀಕ್ಷೆ ಗಾಗಿ ಪಂಚಾಯತ್ ಕಚೇರಿಗೆ ಬಂದು ಮಾಹಿತಿಯನ್ನು ನೀಡುವಂತೆ ಒತ್ತಡ ಹೇರಲಾಗುತ್ತಿದೆ.

ಮನೆಮನೆಗೆ ಬಂದು ಬೇಕಾದ ಮಾಹಿತಿ ಕೇಳಿ ಸಂಗ್ರಹಿಸುವುದು ಯಾವುದೇ ಗಣತಿ/ಸಮೀಕ್ಷೆ ಯ ಪದ್ಧತಿ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ,ನಿಮ್ಮ ಊರಿನಲ್ಲಿ ಮೊಬೈಲ್ ನೆಟವರ್ಕ್ ಇಲ್ಲದಿರುವುದರಿಂದ ಓಟಿಪಿ ಪಡೆಯಲು ಸಾರ್ವಜನಿಕರೇ ಪಂಚಾಯತ್ ಕೇಂದ್ರಕ್ಕೆ ಬರಬೇಕು ಎಂದು ಹೇಳಲಾಗುತ್ತಿದೆ. ಎಂತ ವಿಪರ್ಯಾಸ ನೋಡಿ ಇದು ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ.
ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೆ ಮೊದಲು ಆ ಸಮಸ್ಯೆಯನ್ನು ಪರಿಹರಿಸಬೇಕು ಎಂಬ ಕನಿಷ್ಠ ಜ್ಞಾನವೂ ಸರಕಾರಕ್ಕೆ ಇಲ್ಲವೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.

ಈಗಿನ ಮಾಹಿತಿ ಯುಗದಲ್ಲಿ ಸರಕಾರದ ವಿವಿಧ ಯೋಜನೆಗಳ ಅನುಷ್ಟಾನ, ವಿದ್ಯಾಭ್ಯಾಸ, ಬ್ಯಾಂಕಿಂಗ್ ಸೇವೆ ಎಲ್ಲವೂ ಗಳಿಗೆ ಮೊಬೈಲ ಸಂಪರ್ಕ ಅನಿವಾರ್ಯ ಇದು ಸರಕಾರದ ಲಕ್ಸಕ್ಕೆ ಯಾಕೆ ಬರುತ್ತಿಲ್ಲ ತಾಲೂಕಿನಲ್ಲಿ 47 bsnl ನೆಟ್ವರ್ಕ್ ಸಂಪರ್ಕ ಕೇಂದ್ರ ಗಳನ್ನು ಕೇಂದ್ರ ಸರಕಾರ ನೀಡಿದರೂ ಜಾರಿ ಮಾಡದ ಸರಕಾರ, ಗಣತಿ ಮಾಡಲು ಮೊಬೈಲ್ ನೆಟ್ವರ್ಕ್ಇಲ್ಲ ಎಂದು ಜನರನ್ನು ಗಣತಿಗೆ ಗ್ರಾಮ ಪಂಚಾಯತ್ ಕ್ಕೆ ಕರೆಸುವುದು ಎಷ್ಟು ಸರಿ ಎನ್ನುವುದು ಜನಸಾಮಾನ್ಯ ರಿಂದ. ಕೇಳಿ ಬಂದಿದೆ
ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಸರಕಾರದ ವ್ಯವಸ್ಥೆ ಜನರ ಬಾಗಿಲಿಗೆ ಬರಬೇಕೇ ವಿನಹ ಜನರೇ ಸರಕಾರದ ಬಾಗಿಲಿಗೆ ಅಲ್ಲ ಎಂದು
ಸರಕಾರ ತಿಳಿದು ಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ತಾಸಲೂಕಿನ ಜನರನ್ನು ಕಾಡುತ್ತಿದೆ.