ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಭವನ ಜೋಯಿಡಾದಲ್ಲಿ ರಾಜ್ಯ ಕಂಡ ಮಹಾನ್ ಸಾಹಿತಿ ದಿ: ಎಸ್. ಎಲ್. ಭೈರಪ್ಪ ನವರಿಗೆ ನುಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕ. ಸಾ. ಪ. ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ, ರಾಜ್ಯದ ಮೇರು ಸಾಹಿತಿ, ಭೈರಪ್ಪನವ ಬರಹಗಳಲ್ಲಿ ನೈಜತೆ ಮತ್ತು ವಾಸ್ತವಿಕತೆಯ ಸ್ಪರ್ಶ ಇದ್ದು, ಓದುಗರನ್ನು ಸಾಹಿತ್ಯ ಕ್ಷೇತ್ರಕ್ಕೆ ಆಕರ್ಷಿಸಿಸುವಲ್ಲಿ ಇವರ ಕೃತಿ ಯಶಸ್ವಿಯಾಗಿದೆ. ಇವರ ಅಗಲುವಿಕೆ ರಾಜ್ಯದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಈ ಮಹಾನ್ ಸಾಹಿತಿಯ ಆತ್ಮಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ, ತಾಲೂಕಾ ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಕ. ಸಾ. ಪ. ಕಾರ್ಯದರ್ಶಿ ಪ್ರೇಮಾನಂದ ವೇಳಿಪ, ದೇವಿದಾಸ ವೇಳಿಪ, ದಯಾನಂದ ಕುಂಬಗಾಳಕರ್, ವಿಕಾಶ ವೇಳಿಪ, ಎಸ್. ಬಿ. ಸಿಂದೆ, ವಿನಾಯಕ ಪಟಗಾರ, ರಾಮಚಂದ್ರ ಶಾಸ್ತ್ರಿ, ಸುರೇಶ ವೇಳಿಪ ಮುಂತಾದವರು ಉಪಸ್ಥಿತರಿದ್ದರು.