ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಪ್ರವಾಸೋದ್ಯಮ ಕ್ಕೆ ಮತ್ತೆ ಕಳೆ ಬಂದಿದೆ, ಅದಕ್ಕೆ ಮುಖ್ಯಕಾರಣ ಕಾಳಿ ನದಿಯಲ್ಲಿ ನಡೆಸುವ ರಾಫ್ಟಿಂಗ್ ಕಾರಣ.
ಕರ್ನಾಟಕ ದ ಕಾಶ್ಮೀರ ಎಂದೇ ಹೆಸರು ಪಡೆದ ಜಿಲ್ಲೆ ಉತ್ತರ ಕನ್ನಡ, ಉತ್ತರ ಕನ್ನಡ ದ ಕಾಶ್ಮೀರ ಜೋಯಿಡಾ ತಾಲೂಕು, ಈ ತಾಲೂಕಿನಲ್ಲಿ ಇರುವ ಸೃಷ್ಟಿ ಸೌಂದರ್ಯ ಗಳು ಇನ್ನೆಲ್ಲೂ ಕಾಣಲು ಸಿಗದು ಎಂಬ ಮಾತಿದೆ, ಗಿರಿ ಶಿಖರ ಜರಿ ನೀರು ಸ್ವಚ್ಛoದ ಆಕಾಶ ಎಂಬ ಕವಿ ವಾಣಿ ಇಲ್ಲಿನ ಪರಿಸರಕ್ಕೆ ಪೂರಕ ವಾಗಿದೆ ಎಂಬ ಮಾತುನಿಸರ್ಗಪ್ರಿಯರಿಂದ.ಕೇಳಿಬರುತ್ತಿದೆ .
ಅಕ್ಟೊಬರ್ ತಿಂಗಳು ಹೆಚ್ಚಿನ ಶಾಲೆ ಕಾಲೇಜು ಗಳಿಗೆ ರಜೆ ಇರುವ ಕಾರಣ ಬಾಲಕರು ಪಾಲಕರು ಸೇರಿ ಪ್ರವಾಸಿ ತಾಣ ಗಳನ್ನು ಅರಸಿ ಜೋಯಿಡಾ ದತ್ತ ಮುಖ ಮಾಡುತ್ತಾರೆ. ಅವರಿಗೆ ತಾಲೂಕಿನಲ್ಲಿ ನೋಡತಕ್ಕ ಸ್ಥಳಗಳು ವಿಶೇಷ ವಾಗಿ ಕೆನೊಪಿ ವಾಕ್, ಗಣೇಶ ಗುಡಿಯ ರಾಫ್ಟಿಂಗ್, ಕೆಸಲ್ ರಾಕ್ ನ ದೂದ್ ಸಾಗರ, ಸುಪಾ ಡ್ಯಾಮ್ ನ ಹಿಂನ್ನೀರು, ಕೇಳಾ ಪಾನಿ, ವಸತಿಗೃಹ ಉಳವಿ ದೇವಸ್ಥಾನ, ಅಣಶಿ ಅಬಯಾರಣ್ಯ, ಸಿಂತೇರಿ ರಾಕ್ಸ್, ಕಂಚಿಕಲ್ಲು ಶಿವಪುರದ ತೂಗು ಸೇತುವೆ ಜೋಯಿಡಾ ದ ದೋಣಿ ವಿಹಾರ ಕೂಡ ಸೇರಿದಂತೆ ಹಲವಾರು ಸ್ಥಳಗಳು ಜನ ಆಕರ್ಷಣೆಯ ಸ್ಥಳ ಗಳಿವೆ ಇವೆಲ್ಲವೂ ಗಳೂ ಜೋಯಿಡಾ ತಾಲೂಕಿನ ಪ್ರವಾಸಿ ಸ್ಥಳ ಗಳಾಗಿದ್ದು, ತಾಲೂಕಿನ ರೆಸಾರ್ಟ್ ಗಳು ಹೋಂ ಸ್ಟೇ ಗಳು ಪ್ರವಾಸಿಗರಿಗೆ ಉತ್ತಮ ಸೇವೆ ನೀಡುತ್ತಿವೆ.ಇದರಿಂದ ತಾಲೂಕು ಜನರಿಂದ ತುಂಬಿ ತುಳುಕುವಂತಾಗಿದೆ.
ಪ್ರವಾಸಿಗರಿಗೆ ಸದಾ ಸ್ವಾಗತ ನೀಡುತ್ತಿರುವ ಗಣೇಶ ಗುಡಿಯ ವಿವಿಧ ಹೋಮ್ ಸ್ಟೇ ಗಳು ರೆಸಾರ್ಟ್ ಗಳು, ಫೈವ್ ಸ್ಟಾರ್ ವಸತಿ ಗ್ರಹ ಗಳು ಪ್ರವಾಸಿಗರನ್ನು, ನಂಬಿ ಬದುಕು ಕಟ್ಟಿಕೊಂಡಿವೆ. ಅವರೆಲ್ಲರೂ ಬಿಡುವಿಲ್ಲದೆ ದುಡಿಯುವ ಕಾಲ ಈ ಪ್ರವಾಸೋದ್ಯದಿಂದ ನಡೆಯುತ್ತಿದೆ. ಇಲ್ಲಿನ ರಾಫ್ಟಿಂಗ್ ನೀರಿನ ಸೆಳೆತದ ನಡುವೆ ನಡೆಯುತ್ತಿರುವದನ್ನು ನೋಡಲು ಎದೆ ಗಟ್ಟಿ ಮಾಡಿಕೊಳ್ಳ ಬೇಕು, ಆದರೆ ಕೆಲವರಿಗೆ ಇದು ನಿರಾಯಾಸ ವಾಗಿ ಬರುತ್ತದೆ ಎನ್ನುತ್ತಾರೆ. ಪ್ರವಾಸಿಗರು. ಒಟ್ಟಾರೆ ಪ್ರವಾಸೋದ್ಯಮ ಜೋಯಿಡಾ ದ ಜೀವಕಳೆ ಹೆಚ್ಚಿಸಿದೆ.