ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮತ್ತೆ ಮಳೆ ಬೀಳುತ್ತಿದ್ದು, ನಿರಂತರ ಮಳೆಯಿಂದ ಮತ್ತೆ ಮಳೆಗಾಲ ಆರಂಭದ ನೆನಪನ್ನು ತಂದಿದೆ. ಈ ಮಳೆಯಿಂದ ರೈತರ ಬದುಕು ತುಂಬಾ ಕಷ್ಟ ಕರ ವಾಗಿದೆ. ಬೆಳೆ ಕೈಗೆ ಸಿಗುವ ಸಮಯ ಹತ್ತಿರ ಬರುತ್ತಿದ್ದಂತೆ, ಬೀಳುವ ಮಳೆಯಿಂದ ಬೆಳೆ ನಾಶ ವಾಗುತ್ತಿದ್ದು, ಮುಂದಿನ ಜೀವನ ನಿರ್ವಹಣೆ ಯ ಸಮಸ್ಯೆ ಕೃಷಿಕರನ್ನು ಕಾಡುತ್ತಿದೆ.
ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳು ನಿಂತಿವೆ. ಕೃಷಿ ಬದುಕಿಗೆ ಕಾಡು ಪ್ರಾಣಿಗಳು ವಿಪರೀತ ಧಾಳಿ ಮಾಡಿ ಪಸಲನ್ನು ಹಾಳು ಮಾಡುತ್ತಿವೆ. ಮಂಗ, ಕೆಂಪಳಿಲು, ಹಂದಿ, ಮುಳ್ಳುಹಂದಿ, ಕಡವೆಗಳು, ರೈತರ ಬತ್ತ, ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳು ಮೆಣಸು, ಸೇರಿದಂತೆ, ಗಡ್ಡೆ ಗೆಣಸು ಗಳನ್ನೂ ಕೂಡ, ನಾಶ ಮಾಡುತ್ತಿವೆ, ಇದು ರೈತರಿಗೆ ನುಂಗಲಾರದ ತುತ್ತಾಗಿದೆ.
ಯಾರಿಗೆ ಹೇಳೋಣ, ನಮ್ಮ ಸಂಕಷ್ಟ ಎಂದು ರೈತರು ಒದ್ದಾಟ ನಡೆಸುತ್ತಿದ್ದಾರೆ. ಪ್ರತಿದಿನ ಪಸಲಿಗೆ ಬರುವ ಕಾಡು ಪ್ರಾಣಿಗಳ ಲೆಕ್ಜ ಅರಣ್ಯ ಇಲಾಖೆಗೆ ಹೇಳುವದೂ ಕಷ್ಟ, ಅವರು, ತೋಟ ಗಾರಿಕೆ ಇಲಾಖೆಯವರು ಪ್ರತಿದಿನ, ಕಾಡು ಪ್ರಾಣಿಗಳು ಹಾಳು ಮಾಡಿದ ರೈತರ ಬದುಕಿಗೆ ತಾಲೂಕಿನಲ್ಲಿ ಓಡಾಡುವದು ಕಷ್ಟ, ಹೀಗಾಗಿ ಹಾಳಾಗುತ್ತಿರುವ ಬೆಳೆಯನ್ನು ನೋಡಿಯೂ ಹೇಳಲಾರದ, ಸ್ಥಿತಿಯಲ್ಲಿ ಕೃಷಿಕರಿದ್ದಾರೆ.
ಮತ್ತೆ ವಿಪರೀತ ಮಳೆಯಿಂದ ಬತ್ತ, ಅದಿಕೆ ಗಳಿಗೆ ಕೊಳೆ ರೋಗ ಬಂದಿದ್ದು, ಅದಿಕೆ ಗಿಡಗಳಿಗೂ ಈ ರೋಗ ಅಂಟುವ ಸಾಧ್ಯತೆ ಇದ್ದ ಕಾರಣ, ಕೃಷಿ ತೋಟಗಾರಿಕೆ ಅಧಿಕಾರಿಗಳು ಈ ಬಗ್ಗೆ ಸರಕಾರಕ್ಕೆ ಸೂಕ್ತ ಮಾಹಿತಿ ನೀಡಬೇಕಾಗಿದೆ. ಮಳೆ ಮಾಪನ ಕೇಂದ್ರ ಗಳನ್ನು ಸರಿಯಾಗಿ ನಿಯಂತ್ರಿಸಿ ರೈತರಿಗೆ ಬೆಳೆವಿಮೆ ಸರಿಯಾಗಿ ಸಿಗುವಂತೆ, ನೋಡಿಕೊಳ್ಳಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ.