ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಜೋಯಿಡಾ ದ ನಾದ ವರ್ಷಿಣಿ ಟ್ರಷ್ಟ ಗುಂದ (ಮರಡಾ )ಇವರು ದಸರಾ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಶರತ್ ಸಂಭ್ರಮ ವನ್ನು ನಂದಿಗದ್ದೆಯ ಬಯಲು ರಂಗ ಮಂದಿರದಲ್ಲಿ ಅಕ್ಟೊಬರ್ ದಿನಾಂಕ 2 ಮತ್ತು 3 ರಂದು ಆಯೋಜಿಸಿದ್ದಾರೆ. ಪ್ರತಿ ದಿನ ಸಾಯಂಕಾಲ 4 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭ ವಾಗಲಿದೆ. ಎಂದು ಸಂಘಟಕರು ತಿಳಿಸಿದ್ದಾರೆ.

ದಿನಾಂಕ 2ರಂದು ಸಾಯಂಕಾಲ 4 ಘಂಟೆಗೆ ಸಂಗೀತ ಮತ್ತು 4 30 ರಿಂದ ಡಾ,, ರವೀಂದ್ರ ಜಿ, ಹುಬ್ಬಳ್ಳಿ ಅವರಿಂದ ಸಂಸ್ಕಾರ ಸುಗಂಧ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ನಂತರ ನರಷಿಂಹ ಭಟ್ ಕುಂಕಿ ಯಲ್ಲಾಪುರ ಇವರ ನಿರ್ದೇಶನದಲ್ಲಿ ದಾನಶೂರ ಕರ್ಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ದಿನಾಂಕ 3 ರಂದುಸಾಯಂಕಾಲ 4 ಘಂಟೆಗೆ ಸಂಸ್ಥೆಯ ವಿದ್ಯಾರ್ಥಿ ಗಳಿಂದ ಸಂಗೀತ ಮತ್ತು ವಿಗ್ನೇಶ್ ಭಾಗ್ವತ ಯಲ್ಲಾಪುರ ಇವರಿಂದ ಸಂಗೀತ ಕಾರ್ಯಕ್ರಮ ನಂತರ ರಾಮಕೃಷ್ಣ ಗದ್ದೆ ನಿರ್ದೇಶನ ದಲ್ಲಿ ಶ್ರೀ ರಾಮಾ0ಜನೇಯ, ಎಂಬ ಯಕ್ಷಗಾನ ತಾಳಮದ್ದಳೆಕಾರ್ಯಕ್ರಮನಡೆಯಲಿದೆ, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷರಾದ ಸುಧಾಮ ದಾನಗೇರಿ ಪ್ರಕಟಿಸಿರುತ್ತಾರೆ.