ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತದ ಪರಿಶಿಷ್ಟ ಪಂಗಡದ ಮತ್ತು ಹಿಂದುಳಿದ 20 ಕುಟುಂಬ ಗಳಿಗೆ ಉಚಿತ ಸೋಲಾರ ವಿದ್ಯುತ್ ಕಿಟ್ಟ ಗಳನ್ನುವಿತರಿಸುವ ಕಾರ್ಯಕ್ರಮ ನಂದಿಗದ್ದೆಯ ಬಸಾಪುರದ ಪರಿಶಿಷ್ಟರ ಕಾಲೋನಿಯಲ್ಲಿ ನಡೆಯಿತು.
ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ ಉಚಿತ ಸೋಲಾರ್ ಕಿಟ್ ಗಳನ್ನು ನೀಡಿರುತ್ತದೆ ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆಯಅಧಿಕಾರಿ ಗಂಗಾಧರ ಅವರು ಕಾರ್ಯಕ್ರಮ ದಲ್ಲಿ ಬಾಗವಹಿಸಿ ಇಲಾಖೆಯ ಉದ್ದೇಶ ಗಳನ್ನು ವಿವರಿಸಿದರು. ಪರಿಶಿಷ್ಟ ಜಾತಿ ಜನಾಂಗದವರ ಸಮಸ್ಯೆ ಗಳ ಪರಿಹಾರಕ್ಕೆ ಈ ಯೋಜನೆ ತಂದಿದ್ದು ಮುಂದಿನದಿನಗಳಲ್ಲಿ ರೂ, ಎಂಟು ಕೋಟಿಯ ಯೋಜನೆ ತರುವ ಮೂಲಕ ಕೌಶಲ್ಯ ಆಧಾರಿತ ಯೋಜನೆ ಜಾರಿಮಾಡಲಾಗುವದು ಎಂದರು ಈ ಯೋಜನೆ ಗಳ ಮೂಲಕ ನಾವು ಸೋಲಾರ್ ಲೈಟ್ ವಿತರಿಸುತ್ತಿದ್ದೇವೆ ಎಂದರು. ಗ್ರಾಮ ಪಂಚಾಯತ ಸದಸ್ಯ. ಧವಳೋ ಸಾವರ್ಕರ್ ಮಾತನಾಡಿ ವಿದ್ಯುತ್ ಅಬಾವದ ಸಮಯದಲ್ಲಿ ಈ ಯೋಜನೆ. ಬಂದಿದೆ ಇದರ ಸದುಪಯೋಗ ವನ್ನು ಪಲಾನುಭವಿಗಳು ಪಡೆದುಕೊಳ್ಳಿ ಎಂದು ಯೋಜನೆ ನೀಡಿದ ಕೇಂದ್ರ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಮಾತನಾಡುತ್ತಾ, ಜೋಯಿಡಾ ತಾಲೂಕು ಹಿಂದುಳಿದಿದೆ ಆದರೆ ಅಭಿವೃದ್ಧಿ ಯಲ್ಲಿ ನಮ್ಮ ಗ್ರಾಮ ಪಂಚಾಯತ ಸದಾ ಮುಂದಿದೆ ಈಗಾಗಲೇ ವಿವಿಧ ಅಭಿವೃದ್ಧಿ ಕಾರ್ಯದಲ್ಲಿ ಪಂಚಾಯತ್ ತೊಡಗಿ ಕೊಂಡಿದೆ. ನಮ್ಮ ಪಂಚಾಯತ ಸರಕಾರದಿಂದ ಎರಡು ಬಾರಿ ಗಾಂಧಿ ಪುರಸ್ಕಾರ ಪ್ರಶಸ್ತಿ ಪಡೆದಿದೆ. ಇನ್ನಿತರ ಅಭಿವೃದ್ಧಿ ಕೆಲಸದಲ್ಲಿ ನಿರಂತರ ಮುಂದಿದೆ, ಜೊತೆಗೆ ಬಡವರಿಗೆ ಈಗ ಸೋಲಾರ್ ವಿದ್ಯುತ್ ನೀಡುವ ಮೂಲಕ ಬಡವರ ಮಕ್ಕಳ ಶಿಕ್ಷಣ ಕ್ಕೆ ಅನುಕೂಲ ಕಲ್ಪಿಸಿದಂತಾಗಿದೆ, ಇದು ಸರಕಾರ ಉತ್ತಮ ಕೆಲಸ ಇದನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಮಾಡಿದೆ. ಇದು ಇಲ್ಲಿನ ಬಡವರಿಗೆ ತುಂಬಾ ಅನುಕೂಲ. ವಾಗಲಿದೆ ಈ ಕೆಲಸ ಮಾಡಿದ ಇಲಾಖೆಯ ಅಧಿಕಾರಿಗಳಿಗೆ ಸರಕಾರಕ್ಕೆ ಅಭಿನಂದನೆಗಳು ಎಂದರು. ವೇದಿಕೆಯಲ್ಲಿ, ಗ್ರಾಮ ಪಂಚಾಯತಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ ಸದಸ್ಯೆ ಶೋಭಾ ಎಲ್ಲೆಕಾರ ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಕನ್ಯಾ ದೇಸಾಯಿ, ವಾಸುದೇವ ಭಾಗ್ವತ, ಇತರರು ಉಪಸ್ಥಿತರಿದ್ದರು. ಪಲಾನುಭವಿಗಳು ಖುಷಿ ಯಿಂದ ಇಲಾಖೆಗೆ ಧನ್ಯವಾದ, ತಿಳಿಸಿ ಮಾತನಾಡಿದರು. ಗ್ರಾಮ ಪಂಚಾಯತ, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಸಿಬ್ಬಂದಿ ಗಳು ಸಹಕರಿಸಿದರು