ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ಃಕಾರೊಂದು ಎರಡು ಲಾರಿಗಳ ಮಧ್ಯೆ ಸಿಕ್ಕಿ ಅಪಘಾತಕ್ಕೀಡಾಗಿ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ರಾ.ಹೆದ್ದಾರಿ ಅರಬೈಲ್ ೬೩ ರಲ್ಲಿ ಘಟ್ಟದಲ್ಲಿ ಗುರುವಾರ ನಡೆದಿದೆ.
ಬೆಳಗಾವಿ ಕಡೆಯಿಂದ ಮುರುಡೇಶ್ವರಕ್ಕೆ ಹೋಗುವ ಟೊಯೋಟ ಇನ್ನೋವಾ ಕಾರಲ್ಲಿ ಒಂದು ಮಗು ಸೇರಿದಂತೆ 7 ಜನ ಪ್ರಯಾಣಿಸುತ್ತಿದ್ದಾಗ ಅರಬೈಲ್ ಘಟ್ಟದಲ್ಲಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಗೂಡ್ಸ್ ಲಾರಿ ನಂ. MH14 LB7798 ಹಾಗೂ ಟ್ಯಾಂಕರ್ ನಂ KA35 C 0442 ರ ಮದ್ಯೆ ಕಾರು ಸಿಲುಕಿ ಅಪಘಾತವಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಳಗಾವಿ ಮೂಲದ ಶೋಬಾ, ಪೂರ್ಣಿಮಾ, ಸಾವಿತ್ರಿ, ಸಂಗಯ್ಯ, ಹಾಗೂ ಕಾರು ಚಾಲಕ ಬಸವರಾಜ ಮತ್ತು ಒಂದು ವರ್ಷದ ಹೆಣ್ಣು ಮಗು ಶಶಿಕಾ ರವರು ಗಾಯಗೊಂಡಿದ್ದಾರೆ.ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ.
ಎರಡು ಲಾರಿಗಳ ಮದ್ಯೆ ಕಾರು ಸಿಲುಕಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿ ಏರ್ ಬ್ಯಾಗ್ ಒಪನ್ ಆಗಿದ್ದರಿಂದ ಹೆಚ್ಚಿನ ಗಾಯ ಮತ್ತು ಪ್ರಾಣಾಪಾಯವಾಗಿಲ್ಲ.ಒಬ್ಬರಿಗೆ ಮಾತ್ರ ಕಾಲು ಮುರಿತ ಆಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಲಾಗಿದೆ.ಉಳಿದವರು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತಾದರೂ ಮದ್ಯಾಹ್ನದ ಹೊತ್ತಿಗೆ ಸಂಚಾರಕ್ಕೆ ಪೋಲಿಸರು ಸ್ಥಳಕ್ಕಾಗಮಿಸಿ ಅನುವು ಮಾಡಿಕೊಟ್ಟಿದ್ದಾರೆ.
ನಿನ್ನೆಯಷ್ಟೇ ಈ ಸರಹದ್ದಿನಲ್ಲಿ ೧೦ ಜನರ ಸಾವು,ಮತ್ತು ೧೯ ಜನರಿಗೆ ಗಾಯವಾದ ಭೀಕರ ಘಟನೆ ನಡೆದುಹೋಗಿತ್ತು.