ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ಹಳಿಯಾಳ್ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಪಶುಪಾಲನ ಪಶು ವೈದ್ಯಕೀಯ ಸೇವಾ ಇಲಾಖೆ ಜೋಯಿಡಾ ಇವರ ಸಹಯೋಗದೊಂದಿಗೆ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಕುಂಡಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಎಂ ಡಿ ಬುಲಾಕೆ ಜಾನುವಾರಗಳ ಅಭಿವೃದ್ಧಿ ಅಧಿಕಾರಿ ಪಶು ಆಸ್ಪತ್ರೆ ಜೋಯಿಡಾ ಇವರು ಜಾನುವಾರಗಳ ವಿವಿಧ ತಳಿಗಳ, ಜಾನುವಾರಗಳ ಲಸಿಕೆ, ರೋಗಗಳ, ಔಷಧಿಗಳ ಚಿಕಿತ್ಸೆ ಹಾಗೂ ಇಲಾಖೆ ಸಹಾಯಧನ ಹಾಗೂ ಯೋಜನೆಗಳ ಬಗ್ಗೆ ತರಬೇತಿ ನೀಡಿದರು ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ವಾಸುದೇವ್ ಕಿತ್ತೂರ್ ಆಪ್ತ ಸಮಾಲೋಚಕರು ತಾಲೂಕ ಆಸ್ಪತ್ರೆ ಜೋಯಿಡಾ , ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ತರಬೇತಿಗಳ ಬಗ್ಗೆ ತಿಳಿಸಿದರು ಕಾರ್ಯಕ್ರಮವನ್ನು ಮಂಜುನಾಥ್ ಸಾವಂತ್ ಸಮುದಾಯ ಸಂಘಟಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಆಯೋಜಿಸಿ ವಂದಿಸಿದರು.