ಸುದ್ದಿ ಕನ್ನಡ ವಾರ್ತೆ

ಹಳಿಯಾಳ : ತಾಲೂಕಿನ ಪ್ರತಿಷ್ಠಿತ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ( ಮಾರ್ಕೆಟಿಂಗ್ ಸೊಸೈಟಿಗೆ ) ಸೆಪ್ಟೆಂಬರ್ 21 ರಂದು ನಡೆಯಲಿರುವ ಚುನಾವಣೆಗೆ ಬ ವರ್ಗ ಸ್ಥಾನಕ್ಕೆ ಇಂದು ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಯಾಗಿ ವಿಜಯಕುಮಾರ ಬೋಬಾಟಿ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ ನಾಗನಾಥ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕರಾದ ಶ್ರೀ ಶ್ರೀನಿವಾಸ ಘೋಟ್ನೇಕರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ, ವಿಶೇಷ ಆಹ್ವಾನಿತರಾದ ಅನಿಲ್ ಮುತ್ನಾಳೆ, ಪ್ರಮುಖರಾದ ನಾಗರಾಜ ಪಾಟೀಲ್, ವಿಲಾಸ ಯಡವಿ, ಅಪ್ಪು ಚರಂತಿಮಠ, ಆನಂದ ಕಂಚನಾಳಕರ, ಅಶ್ಫಾಕ್ ಅಹ್ಮದ್ ಪುಂಗಿ, ವಾಸುದೇವ ಪೂಜಾರಿ, ತುಕಾರಾಮ ಜಾವಳ್ಳಿ, ಸೊಸೈಟಿ ನಿರ್ದೇಶಕರಾದ ಲತೀಫಶಾ ಲತೀಫನವರ, ಮಲ್ಲೇಶಿ ಉಪ್ಪಿನ, ಪರಶುರಾಮ ಪವಾರ, ಕುಮಾರ ಕಲಭಾವಿ, ಮುಖಂಡರಾದ ನಾಗರಾಜ ಬಾಂದೇಕರ, ಸಿದ್ದು ಶೆಟ್ಟಿ,ಆಕಾಶ ಉಪ್ಪಿನ, ಸೋಮನಗೌಡ ಹಟ್ಟಿಹೊಳಿ, ಫಯಾಜ್ ಶೇಖ್, ಈಶ್ವರ ಗಾಣಿಗೇರ, ಸತೀಶ ಗೌಡಾ, ಮೊದಲಾದವರು ಇದ್ದರು.