ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ , ನಂದಿಗದ್ದೆ, ಗ್ರಾಮ ಪಂಚಾಯತದ ಯರಮುಖ ದ ವರೆಗೆ ಶಿರಸಿ ಉಳವಿ ಬಸ್ ಬರಲಿ ಎಂದು ಗುಂದ ದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಿರಸಿ ಉಳವಿ ಬಸ್ ಈ ಹಿಂದೆ ನಂದಿಗದ್ದೆ ಯರಮುಖ ದ ಮೇಲಿಂದ ಉಳವಿಗೆ ಹೋಗುತ್ತಿತ್ತು, ಆದರೆ ಈ ವರ್ಷದ ಮಳೆಗಾಲದ ಪೂರ್ವದಲ್ಲಿ, ತಾಲೂಕಿನ ಫೋಟೋಲಿ, ಗುಂದ ಉಳವಿ ಮಾರ್ಗದ ಕೈಟಾ ನಾಲೆಯ ಸೇತುವೆ ಕುಸಿತ ವಾದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ನಿಂತಿದೆ.
ಈ ರಸ್ತೆಯಲ್ಲಿ ಬರುವ ಎಲ್ಲಾ ಬಸ್ ಗಳೂ ಜೋಯಿಡಾ ಮೇಲಿಂದ ಉಳವಿಗೆ ಹೋಗುತ್ತಿರುವ ಕಾರಣ, ಅವುರ್ಲಿ, ನಂದಿಗದ್ದೆ, ಗುಂದ, ಯರಮುಖ, ಸೇರಿದಂತೆ ಹತ್ತಾರು ಹಳ್ಳಿ ಗಳ ಜನತೆಗೆ ತೊಂದರೆ ಆಗಿದೆ. ಈಗ ಶಿರಸಿ ಉಳವಿ ಬಸ್ ಜೋಯಿಡಾ ಮೇಲಿಂದ ಉಳವಿಗೆ ಬಂದು ಮುಂದೆ ನಂದಿಗದ್ದೆ ಮೂಲಕ ಯರಮುಖ ಕ್ಕೆ ಬಂದು ವಸತಿ ಮಾಡಿದರೆ ಈ ಹತ್ತಾರು ಹಳ್ಳಿಗಳ ಜನತೆಗೆ ಮೊದಲಿನಂತೆ ಅನುಕೂಲ ವಾಗುತ್ತದೆ, ಮತ್ತು ವ್ಯಾಪಾರ ವ್ಯವಹಾರ ಇರುವ ರೈತರು ಶಿರಸಿ ಯಲ್ಲಾಪುರ ಮಾರುಕಟ್ಟೆ ಗಳಿಗೆ ಹೋಗಲು ಅನುಕೂಲಕರ ಎಂದು ಸ್ಥಳೀಯರು ಹೇಳುತ್ತಾರೆ… .
ಹಾಗೇ ರಾತ್ರಿ ವಸತಿಗೆ ಬರುವ ದಾಂಡೇಲಿ ತಮ್ಮಣಿಗೆ ಬಸ್ ದಾಂಡೇಲಿ ಯಿಂದ ಮದ್ಯಾಹ್ನ ತಮ್ಮಣಿಗೆ ವರೆಗೆ ಬಂದರೆ, ಈ ಎರಡೂ ಬಸ್ ಗಳಿಂದ ಗ್ರಾಮಸ್ಥರು ನೆಮ್ಮದಿ ಯಿಂದ ಕೆಲಸ ಕಾರ್ಯಗಳನ್ನು ಮುಗಿಸಿ ಕೊಳ್ಳಲು ಅನುಕೂಲ ವಾಗುತ್ತದೆ, ತಮ್ಮಣಿಗೆ ಬಸ್ಸು ಈಗ ಪ್ರತಿದಿನ ರಾತ್ರಿ 10 ಘಂಟೆಯ ಮೇಲೆ ಬರುತ್ತದೆ, ಹೀಗಾಗಿ ಬಸ್ ನಲ್ಲಿ ಯಾರೂ ಇರದ ಕಾರಣ ಮಹಿಳೆಯರು ಬಸ್ ಹತ್ತಲು ಹೆದರುತ್ತಾರೆ, ರಾತ್ರಿ ಬಸ್ ಕೆಟ್ಟು ನಿಂತರೆ ಗತಿಯೇನು ಎಂದು ಹೆಸರು ಹೇಳಲು ಇಚ್ಚಿಸದ ಮಹಿಳೆಯರು ಹೇಳು ತ್ತಾರೆ, ಮದ್ಯಾಹ್ನ ಬಸ್ ಬಂದರೆ ನಮ್ಮ ಅಂಚೆ ಇಲಾಖೆ ಯವರಿಗೆ ತುಂಬಾ ಅನುಕೂಲ ವಾಗುತ್ತಿತ್ತು, ಈಗ ನಾವು 40 ಕಿ ಮೀ ದೂರದಿಂದ ಬೈಕ್ ಮೇಲೆ ಅಂಚೆ ಬ್ಯಾಗ ತರುವುದು ತುಂಬಾ ತೊಂದರೆ, ಜೊತೆಗೆ ಕರಡಿ ಹುಲಿಗಳು ಓಡಾಡುವ ಪ್ರದೇಶ ಏನು ಮಾಡೋಣ ಎಂದು ತಮ್ಮ ಕಷ್ಟ ಹೇಳುತ್ತಾರೆ.
ಎಲ್ಲಾ ತಿಳಿದ ವಾಯುವ್ಯ ಕರ್ನಾಟಕ ಸಾರಿಗೆ ಇಲಾಖೆ ಯವರು ಮಾನವೀಯತೆ ದೃಷ್ಟಿ ಯಿಂದ ಜೊತೆಗೆ ಸರಕಾರದ ಸ್ತ್ರೀ ಬಾಗ್ಯ ವಾದ ಸಾರಿಗೆ ಬಾಗ್ಯ ಮಹಿಳೆಯರಿಗೆ ಸಿಗುವ ದೃಷ್ಟಿ ಯಿಂದ ಲಾದರೂ, ಹೊಸ ಸೇತುವೆ ಆಗುವ ವರಗೆ ಈ ಎರಡೂ ಬಸ್ ಗಳನ್ನು ಸಂಜೆ ಮತ್ತು ಮದ್ಯಾಹ್ನ ಬಿಡುವ ಮೂಲಕ ಗ್ರಾಮೀಣ ಜನರ ಆರೋಗ್ಯ, ಶಿಕ್ಷಣ, ವ್ಯವಹಾರ, ಇನ್ನಿತರ ವಿಷಯ ಗಳಿಗೆ ಅನುಕೂಲ ಮಾಡಿ ಕೊಡಲಿ ಎಂದು, ಗ್ರಾಮಸ್ಥರು ದಾಂಡೇಲಿ ಮತ್ತು ಯಲ್ಲಾಪುರ ಘಟಕ ಗಳ ಸಾರಿಗೆ ಅಧಿಕಾರಿ ಗಳಿಗೆ ಆಗ್ರಸಿದ್ದಾರೆ, ಜೊತೆಗೆ ಜಿಲ್ಲಾಧಿಕಾರಿ ಗಳಿಗೆ, ತಾಲೂಕು ದಂಡಾಧಿಕಾರಿ ಗಳಿಗೆ ಆಗ್ರಹಿಸಿದ್ದಾರೆ.