ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲ್ಲೂಕಿನ ಜನರಿಗೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ, ಕಾರವಾರದಿಂದಬೆಳಗಾವಿ,ದಾಂಡೇಲಿ, ಧಾರವಾಡಕ್ಕೆ ಪ್ರತಿ ದಿನವೂ ನೂರಾರು ವಾಹನಗಳು ಸಂಚರಿಸುವ , ಲೋಕೋಪಯೋಗಿ ಇಲಾಖೆ ಅದಿನದಲ್ಲಿರುವ ಪ್ರಮುಖ ರಾಜ್ಯ ಹೆದ್ದಾರಿ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿ 34ರ ದುಸ್ಥಿತಿಯಿಂದ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.

. ರಾಜ್ಯ ಹೆದ್ದಾರಿ ತಾಲ್ಲೂಕಿನ ಡೋಕ್ರಪ್ಪಾ ಕ್ರಾಸ್ ನಿಂದ ಜೊಯಿಡಾ ತಾಲ್ಲೂಕಾ ಗಡಿ ಬರಪಾಲಿಯವರೆಗೆ ಸುಮಾರು 10 ಕಿಮೀರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯುದ್ದಕ್ಕೂ ಗುಂಡಿಗಳೇ ತುಂಬಿಕೊಂಡಿವೆ. ಸಂಪೂರ್ಣವಾಗಿ ಹಾಳಾದರಸ್ತೆ ಗುಂಡಾಳಿಯಿಂದ ಡೋಕ್ರಪ್ಪಾಘಾಟ್ ಕ್ರಾಸ್ ವರೆಗೆ ಸುಮಾರು ಹತ್ತು ಕಿಮೀ ರಸ್ತೆಯನ್ನು ಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಡೋಕ್ರಪ್ಪಾ ಕ್ರಾಸ್ ನಿಂದ ಬರಪಾಲಿಯವರೆಗೆ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಮಾಸೇತ,ನುಜ್ಜೀ, ನಿಗುಂಡಿ ಮತ್ತು ಬಾಡಪೋಲಿ ಗ್ರಾಮದ ಜನರು ವಿದ್ಯಾರ್ಥಿಗಳು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ, ಈ ಮಾರ್ಗದಲ್ಲಿ ಮೊದಲು ಎಲ್ಲ ಹಳ್ಳಿಗಳ ಬಸ್ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದ ಕುಮಟಾ- ಕೋಲ್ಹಾಪುರ, ಉಡಪಿ -ಬೆಳಗಾವಿ, ಕಾರವಾರ -ಪಿಂಪ್ರೀ ಮುಂತಾದ ಬಸ್ಗಳನ್ನು ರಸ್ತೆ ಸಮಸ್ಯೆಯ ಕಾರಣ ನೀಡಿ ನಿಲ್ಲಿಸುವುದಿಲ್ಲ, ಆರೋಗ್ಯ ಹಾಗೂ ಇನ್ನಿತರ ಸಂದರ್ಭದಲ್ಲಿ ಬಾಡಿಗೆಗೆ ವಾಹನಗಳು ಸಹಿತ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಹೆದ್ದಾರಿ ಸಂಪೂರ್ಣ ದೂಳು ಮತ್ತು ಹೊಂಡಗಳಿಂದ ತುಂಬಿದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ ಬಸ್ ಅಥವಾ ದೊಡ್ಡ ವಾಹನಗಳು ಬಂದರೆ ಇವರಿಗೆ ದೂಳಿನ ಅಭ್ಯಂಜನವೆ ಆಗುತ್ತದೆ.ಮಳೆ ನೀರು ನಿಂತು ಕೆಲವೊಮ್ಮೆ ಗುಂಡಿಗಳ ಆಳ ಅರಿಯಲಾಗದೆ ಅಪಘಾತಗಳು ಸಹ ಸಂಭವಿಸುತ್ತಿದೆ.
ಸೂಮಾರು ಹದಿನೈದು ವರ್ಷಗಳ ಹಿಂದೆ ಈ ರಾಜ್ಯ ಹೆದ್ದಾರಿ ಗುಂಡಾಳಿಯಿಂದ ಬರಪಾಲಿಯವರೆಗೆ ಸಂಪೂರ್ಣ ಹಾಳಾಗಿದ್ದರಿಂದ ಖಾಸಗಿ ವಾಹನಗಳು ಮತ್ತು ಪ್ರಯಾಣಿಕರ ಖಾಸಗಿ ಟೆಂಪೋ ಗಳು ಈ ಮಾರ್ಗದಲ್ಲಿ ಸಂಚಾರವನ್ನು ನಿಲ್ಲಿಸಿದ್ದರು ಇದರಿಂದ ಸುತ್ತ ಮುತ್ತಲ ಹಳ್ಳಿಗಳ ಜನರು ಪರದಾಡುವಂತಾಗಿತ್ತು, ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಪಡಿಸದಿದ್ದರೆ ಹದಿನೈದು ವರ್ಷಗಳ ಹಿಂದಿನ ಕರಾಳ ದಿನಗಳು ಅಣಶಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹತ್ತು ಹಳ್ಳಿಗಳ ಜನರಿಗೆ ಬರಲಿದೆ ಎನ್ನುತ್ತಾರೆ ಅಣಶಿಯ ಜನತೆ.

ಬಸ್ ಗಳು ಅತಿ ವೇಗವಾಗಿ ಈ ರಸ್ತೆಯಲ್ಲಿ ಸಂಚರಿಸುವುದರಿಂದ ಹಿಂಬದಿಯ ಸೀಟಿನಲ್ಲಿ ಕುಳಿತು ಪ್ರಯಾಣಿಸುವುದು ಕಷ್ಟವಾಗುತ್ತಿದೆ ಮೊದಲಿನ ಹಾಗೆ ಖಾಸಗಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದಿಲ್ಲ ,ಕೆಲವು ಬಸ್ ಗಳು ಹಳ್ಳಿಗಳಲ್ಲಿ ನಿಲ್ಲುವುದಿಲ್ಲ ಕೇಳಿದರೆ ರಸ್ತೆ ಸರಿಇಲ್ಲ ಆದ್ದರಿಂದ ನಾವು ಸಮಯ ಹೊಂದಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಇದಕ್ಕೆ ರಸ್ತೆ ಅಭಿವೃದ್ಧಿಯೆ ಪರಿಹಾರ ಎನ್ನುತ್ತಾರೆ ಅಣಶಿಯ ವಿನೋದ. ಮತ್ತು ಭಾರಾಡಿಯ ಸುಭಾಷ………..ರಸ್ತೆ ಅಭಿವೃದ್ಧಿ ಪಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು ಆಗ್ರಹಿಸುತ್ತಿಲ್ಲ, ಗುತ್ತಿಗೆ ಸಿಗುವ ಕಾಮಗಾರಿಗಳನ್ನು ತರಲು ಮತ್ತು ಮಾಡಲು ಆಸಕ್ತಿ ತೋರುತ್ತಾರೆ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಕನಿಷ್ಠ ಒಂದು ಮನವಿ ನೀಡುವ ಕಾರ್ಯಅಣಶಿಪಂಚಾಯ್ತಿಮಾಡುತ್ತಿಲ್ಲ ಎಂದುಅಣಶಿಯುವಕರುಆರೋಪಿಸುತ್ತಾರೆ. …. …… .
ಈ ಬಗ್ಗೆ ಜೋಯಿಡಾ ಲೋಕೋಪಯೋಗಿ ಇಲಾಖೆಯ ಎಇಇ ……….ಬಸವರಾಜ.ಎಸ್ ಹೇಳುತ್ತಾರೆ “ಸದಾಶಿವಗಡ -ಔರಾದ ರಾಜ್ಯ ಹೆದ್ದಾರಿ ಸುಮಾರು 10 ಕಿಮೀ ಅಭಿವೃದ್ಧಿ ಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎನ್ ಡಿ ಆರ್ ಎಫ್ ಅನುದಾನ ಬಂದಿದೆ , ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಹ ರಸ್ತೆ ಪರಿಶೀಲನೆ ನಡೆಸಿದ್ದಾರೆ ,ಮಳೆಗಾಲ ಮುಗಿಯುತ್ತಿದ್ದಂತೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ.