ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘ ಗಳಲ್ಲಿ ಒಂದಾದ, ನಂದಿಗದ್ದಾ ವಿವಿದೊದ್ದೇಶ ಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ, ನಿ, ಯರಮುಖ. ಇದರ ವಾರ್ಷಿಕ ಮಹಾಸಭೆ ಬರುವ ದಿನಾಂಕ 19 ರ ಶುಕ್ರವಾರ ಬೆಳಿಗ್ಗೆ ಯರಮುಖ ದ ಶ್ರೀ ಸೋಮೇಶ್ವರ ಸಭಾ ಭವನ ದಲ್ಲಿ ನಡೆಯಲಿದೆ.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್. ವಿ. ದಾನಗೇರಿ ವಹಿಸಲಿದ್ದಾರೆ.
ಈಗಾಗಲೇ, ಸಂಘದ ಸದಸ್ಯರಿಗೆ ಸಭೆಯ ನೋಟಿಸು, ಮತ್ತು ಅಡಾವೇ ಪತ್ರಿಕೆ ಗಳನ್ನು ಪೂರೈಸ ಲಾಗಿದೆ, ಸಂಘವು ಕಳೆದ ಸಾಲಿನಲ್ಲಿ (2024 2025)ರೂಪಾಯಿ 19 ಲಕ್ಷ 32 ಸಾವಿರ ಲಾಭ ಗಳಿಸಿದ್ದು ಆಡಳಿತ ಮಂಡಳಿ ಲಾಭ ವಿಭಾಗಣೆ, ಮಾಡಿದೆ, ಕೆಲವು ನಿದಿಗಳು ಲಾಭ ವಿಭಾಗಣೆ ಯ ನಂತರ ಈ ರೀತಿ ಯಾಗಿದ್ದು, ವಾರ್ಷಿಕ ಮಹಾಸಭೆ ಯಲ್ಲಿ ಡಿವಿಡೆಂಡ ಪ್ರಮಾಣ ಘೋಷಣೆ ಆದ ನಂತರ ಅವು ಬದಲಾವಣೆ ಆಗಲೂ ಬಹುದು.ಕಾಯ್ದಿಟ್ಟ ನಿಧಿ ರೂ, 68.29ಲಕ್ಷ ದರಮಾರ್ಥ ನಿಧಿ ರೂ 2.77ಲಕ್ಷ ಮುಳುಗುವ ಸಾಲ ನಿಧಿ 12.16 ಲಕ್ಷ ಕಟ್ಟಡ ನಿಧಿ ರೂ 22.91ಲಕ್ಷ ಪ್ರಕೃತಿ ವಿಕೋಪ ನಿಧಿ ರೂ 1.57ಲಕ್ಷ ಹೀಗೆ ವಿವಿಧ ನಿಧಿಗಳಿದ್ದು ಶೇಕಡಾ 7ರಷ್ಟು ಡಿವಿಡೆಂಡ ತೋರಿಸಲಾಗಿದೆ. ಸಂಘದ ನಂದಿಗದ್ದೆ ಶಾಖೆಯಲ್ಲಿ ಕಳೆದ ವಾರ್ಷಿಕ ಮಹಾಸಭೆ ಯ ತೀರ್ಮಾನದಂತೆ ಸೂಪರ್ ಮಾರ್ಕೆಟ್ ಪ್ರಾರಂಭಿಸಲಾಗಿದ್ದು ಜನರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಸಂಘದ ಸದಸ್ಯರಿಗೆ 491.92ಲಕ್ಷ ಬೆಳೆಸಾಲ, ಸೇರಿದಂತೆ ಒಟ್ಟೂ ನೀಡಿದ ವಿವಿಧ ಸಾಲ ಗಳು ರೂ, 1264.02ಲಕ್ಷ ಗಳು ಆಗಿದ್ದು ಸಾಲ ವಸೂಲಿ ಪ್ರಮಾಣ ಶೇ /99.16 ಆಗಿದೆ. ಎಂದು ಅಡಾವೇ ಪತ್ರಿಕೆಯಲ್ಲಿ ತೋರಿಸಲಾಗಿದೆ.
ಸಂಘದ ವಿವಿಧ ರೀತಿಯ ಗುಂತಾವಣೆ ನಿಧಿ ಯು ರೂ, 5ಕೋಟಿ 65ಲಕ್ಷಕ್ಕೂ ಹೆಚ್ಚಿದೆ. ವರದಿ ವರ್ಷ ದಲ್ಲಿ ರೂ 8ಕೋಟಿ 94ಲಕ್ಷ ಬ್ಯಾಂಕ ಸಾಲ ಪಡೆಯಲಾಗಿದ್ದು,ಮುದ್ದತ್ತುಮೀರಿರುವುದಿಲ್ಲ ಸಂಘ ದಲ್ಲಿ ಠೇವಣಿ ರೂ 8ಕೋಟಿ 33ಲಕ್ಷ ಗಳಷ್ಟು ಇದ್ದು, ಕಳೆದ ವರ್ಷಕ್ಕಿಂತ ರೂ ಒಂದು ಕೋಟಿ 42 ಲಕ್ಷ ಗಿಂತ ಹೆಚ್ಚಾಗಿದೆ.ಒಟ್ಟಾರೆ 13ಜನ ನಿರ್ದೇಶಕರು ಗಳಿದ್ದು, ಉಪಾಧ್ಯಕ್ಷರು ಸುಧರ್ಶನ. ಭಾಗ್ವತ ಮತ್ತು ಮುಖ್ಯ ಕಾರ್ಯ ನಿರ್ವಾಹಕರು ಶಿವರಾಮ ದಬಗಾರ ಆಗಿದ್ಫು ಎಂಟು ಜನ ಸಿಬ್ಬಂದಿ ಗಳಿದ್ದಾರೆ. ಸಂಘವು ಆ ವರ್ಗ ದಲ್ಲಿ ಮುನ್ನಡೆದಿದ್ದು, ಸಂಘದ ಲೆಕ್ಕ ತಪಾಸಾಣೆ ಯನ್ನು ಮೋದಿ, ದವಳಗಿ ಮತ್ತು ಕಂಪನಿ, ಮಾಡಿದೆ