ಜೀ ಕನ್ನಡ ವಾರ್ತೆ

ಜೋಯಿಡಾ:ತಾಲ್ಲೂಕಿನ ಆಮಶೇತ–ಕೊಲೆಮಾಳ ಗ್ರಾಮದಲ್ಲಿ ಗುರುವಾರ ವ್ಯಕ್ತಿಯೊರ್ವ ಸ್ವಂತ ತಮ್ಮನ ಹೆಂಡತಿನ್ನೇ ಗುದ್ದಲಿ ಯಿಂದ ಹೊಡೆದು ಕೊಂದು ಹಾಕಿರುವ ಘಟನೆ ನಡೆದಿದೆ.

ಹತ್ಯೆಗೆ ಬಲಿಯಾದ ಮಹಿಳೆ ಭಾಗ್ಯಶ್ರೀ ಸೋನು ವರಕ (35) ಆಗಿದ್ದು, ಶಂಕಿತ ಆರೋಪಿ ಧೊಂಡು ಗಂಗಾರಾಮ ವರಕ (50) ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ರಾಮನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಫಾರೆನ್ಸಿಕ್ ತಂಡದ ಸಹಾಯದಿಂದ ಸ್ಥಳದ ಪಂಚನಾಮೆ ನಡೆಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ಮುಂದುವರಿದಿದ್ದು, ಪ್ರಕರಣ ರಾಮನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ಸಂದರ್ಭದಲ್ಲಿ ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ ಎಂ.ಎನ್, ದಾಂಡೇಲಿ ಡಿವೈಎಸ್‌ಪಿ ದಯಾನಂದ ಪವಾರ, ಜೋಯಿಡಾ ಸಿಪಿಆಯ್ ಹರಿಹರ, ರಾಮನಗರ ಪಿಎಸ್‌ಐ ಮಹಾಂತೇಶ ನಾಯಕ ಸೇರಿದಂತೆ ಹಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈ ಕೊಡಿದ್ದಾರೆ..