ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಕೃಷಿ ಇಲಾಖೆ ಉತ್ತರಕನ್ನಡ,ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕುಮಟಾ,ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 2025 – 2026 ಕೃಷಿ ಇಲಾಖೆ ಜೋಯಿಡಾ,ಕೃಷಿ ವಿಜ್ಞಾನ ಕೇಂದ್ರ,ವಿವಿಧ ಇಲಾಖೆಗಳ ಸಹಯೋಗ ದೊಂದಿಗೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮದಡಿ ಗ್ರಾಮ ಪಂಚಾಯತ ಮಟ್ಟದಲ್ಲಿ ಸಾವಯವ ಕೃಷಿ ಕುರಿತು ತರಬೇತಿ ಕಾರ್ಯಕ್ರಮ ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ, ವಿವಿಧ ತಜ್ಞರುಗಳು, ಮಾಹಿತಿ ನೀಡುತ್ತಾ, ಸಾವಯವ ಕೃಷಿ ಎಂದರೇನು, ಸಾವಯವ ಕೃಷಿಯ ಮಹತ್ವ ಸಾವಯವ ಉತ್ಪನ್ನಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ಮಾಹಿತಿ, ಸಾವಯವ ಪ್ರಮಾಣಿಕರಣ, ಸಾವಯವ ಮೂಲದ ಗೊಬ್ಬರ, ಪೀಡೆನಾಶಕಗಳು, ರಾಸಾಯನಿಕ ಗೊಬ್ಬರ ಬಳಕೆಯ ದುಷ್ಪರಿಣಾಮ, ಮಣ್ಣು ಪರೀಕ್ಷೆ ಸೇರಿದಂತೆ ವಿವಿಧ ವಿಷಯಗಳ ಅರಿವು ಮೂಡಿಸುವ ಮಾಹಿತಿ ನೀಡಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಬಿಡೀಕರ, ಮಲ್ಲೇಶಪ್ಪ ಬಿಸಿರೊಟ್ಟಿ ಕುಂದಗೋಳ ರೈತರು, ಅಧಿಕಾರಿಗಳಾದ ಮದನ ಮೋಹನ, ಇಬ್ರಾಹಿಂ, ಕೃಷಿ ತಜ್ಞರು, ತಾಲೂಕಿನ ಕೃಷಿ ಇಲಾಖೆ,ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವಲ್ಲಿ ಸಹಕರಿಸಿದರು.

ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಅವೇಡಾ ಗ್ರಾಮ ಪಂಚಾಯತ ಅಧ್ಯಕ್ಷ ರಾದ ಅರುಣ ಭಗವತಿರಾಜ್ ಮಾತನಾಡಿ ಈಗಾಗಲೇ ನಮ್ಮ ತಾಲೂಕನ್ನು ಸಂಪೂರ್ಣ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ತಾಲೂಕಿನ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡಿದ್ದು,ರೈತ ಬಾಂಧವರ ಸಹಕಾರ ಮುಖ್ಯ,ರೈತ ಮಿತ್ರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಅವೇಡಾ ಗ್ರಾಮ ಪಂಚಾಯತ ಸದಸ್ಯರು,ತಾಲೂಕಾ ಜೆಡಿಎಸ್ ಅಧ್ಯಕ್ಷ ಅಜಿತ ಥೋರವತ ಮಾತನಾಡಿ ಸಾವಯವ ಕೃಷಿಯ ಮಹತ್ವ,ಲಾಭದ ಕುರಿತು,ಇಂದಿನ ಪರಿಸ್ಥಿತಿಯಲ್ಲಿ ಅದರ ಅವಶ್ಯಕತೆ ಕುರಿತು ಸಂಧರ್ಬೋಚಿತವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಮಲ್ಲೇಶಪ್ಪ ಬಿಸಿರೊಟ್ಟಿ ಕುಂದಗೋಳ ರೈತರು ತಮ್ಮ ಸಾವಯವ ಕೃಷಿ,ಗೊಬ್ಬರ ತಯಾರಿಕೆ,ಬಳಕೆಯ, ಮಾರುಕಟ್ಟೆಯ ಬಗ್ಗೆ ಇನ್ನಿತರ ಮಾಹಿತಿಯನ್ನು ವಿವರವಾಗಿ ನೀಡಿದರು. ಉಪನಿರ್ದೇಶಕರು ಪ್ರತಿಭಾ ಹೂಗಾರ ಕೃಷಿ ಇಲಾಖೆ,ಕೃಷಿ ವಿಜ್ಞಾನಿ ಅಮಿತ ಪೂಜಾರ ಸಾವಯವ ಕೃಷಿಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮುರಾರಿ, ಗ್ರಾಮ ಪಂಚಾಯತ ಸದಸ್ಯರಾದ ರೇಣುಕಾ ಗದ್ದಿ,ಸುನಿಲ್ ಕಾಂಬ್ಳೆ,ಪಂಚಾಯತ ಅಭಿವೃದ್ಧಿ ಅಧಿಕಾರಿ ನಜೀರ್ ಸಾಬ್ ಅಕ್ಕಿ, ಸದಸ್ಯರು ಸ್ವಸಹಾಯ ಸಂಘಗಳ ಸದಸ್ಯರು, ಊರಿನ ಹಿರಿಯ ರೈತ ಪ್ರತಿನಿಧಿಗಳು, ರೈತರು ಭಾಗವಹಿಸಿ ಮಾಹಿತಿ ಪಡೆದರು.ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ವೀಣಾ ಬಿಡೀಕರ, ಸಿಬ್ಬಂದಿಗಳು,ಅವೇಡಾ ಗ್ರಾಮ ಪಂಚಾಯತದವರು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.