ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಸಾಂಗರ್ಲಿಯಲ್ಲಿಯ ಬಿಎಸ್ಎನ್ಎಲ್ ಮೊಬೈಲ್ ಟವರ್ ಕಳೆದ ಕೆಲವು ದಿನಗಳಿಂದ ಕೆಟ್ಟು ಹೋಗಿದ್ದರಿಂದ ಸುತ್ತುಮುತ್ತಲಿನ ಗ್ರಾಮಗಳ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಬಹಳ ವರ್ಷಗಳ ಹಿಂದೆ ನಿರ್ಮಿಸಿದ ಬಿಎಸ್ಎನ್ಎಲ್ ಟವರ್ ಇದಾಗಿದ್ದು ಅವುರ್ಲಿ,ಗುಂದ,ಯರಮುಖ,ತಾಲೂಕಿನ ಹಳ್ಳಿಗಳಿಗೆ, ಯಲ್ಲಾಪುರ ತಾಲೂಕಿನ ಹಲವು ಹಳ್ಳಿಗಳಿಗೆ ಸೇರಿದಂತೆ ಬಹಳಷ್ಟು ಹಳ್ಳಿಗಳ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆ.
ಟವರ್ ಗೆ ಅಳವಡಿಸಿರುವ ಬ್ಯಾಟರಿ ಚಾರ್ಜರ್ ಪದೇ ಪದೇ ಕೈ ಕೊಡುತ್ತಿದ್ದು, ಅವುಗಳನ್ನು ಸರಿಪಡಿಸಿ ಉತ್ತಮ ಸೇವೆ ನೀಡುವಂತೆ ಗ್ರಾಹಕರು ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಮನವಿ ಮಾಡಿದರು ಅಧಿಕಾರಿಗಳು ಸರಿಪಡಿಸುತ್ತೇವೆ ಎಂದು ಭರವಸೆ ನೀಡುತ್ತಾ ಬಂದಿದ್ದು,ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಆಗಾಗ ವಿದ್ಯುತ್ ವ್ಯತ್ಯಯ ಆಗುತ್ತದೆ,ಉತ್ತಮ ಗುಣಮಟ್ಟದ ಬ್ಯಾಟರಿ, ಚಾರ್ಜರ್ ಅವಶ್ಯಕತೆ ಇರುತ್ತದೆ.ಇಲ್ಲವಾದಲ್ಲಿ ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ದೈನಂದಿನ ವ್ಯವಹಾರ ಗಳಿಗೆ ಮೊಬೈಲ್ ಸಂಪರ್ಕ ಅನಿವಾರ್ಯ ಆಗಿರುವುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕೆನ್ನುವುದೇ ಗ್ರಾಹಕರ ಒತ್ತಾಯವಾಗಿದೆ. ಬಿಎಸ್ಎನ್ಎಲ್ ಮೊಬೈಲ್ ಟವರ್ ಪದೇ ಪದೇ ಕೈ ಕೊಡುತ್ತಿರುವ ಕಾರಣ ಸಂವಹನ, ಒಟಿಪಿ,ಡಿಜಿಟಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಹಕ ಗಣೇಶ ಪಿ. ಬೇಸರ ವ್ಯಕ್ತಪಡಿಸಿದ್ದಾರೆ.