ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕ್ಯಾಸಲ್ ರಾಕ್ ನಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಹಾಗೂ ಸರಕಾರಿ ಪ್ರೌಢಶಾಲೆ ಕ್ಯಾಸಲ್ ರಾಕ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜೋಯಿಡಾ ತಾಲೂಕಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ 2025 – 2026 ರ ವಾಲಿಬಾಲ್ ಗುಂಪು ಸ್ಪರ್ಧೆಯಲ್ಲಿ ಜಗಲಬೇಟ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಜಗಲಬೇಟ ಬಾಲಕರು ಹಾಗೂ ಬಾಲಕಿಯರು ವಾಲಿಬಾಲ್ ಸ್ಪರ್ಧೆಯಲ್ಲಿ ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಇವರಿಗೆ ಮಾರ್ಗದರ್ಶನ,ಸಹಕಾರ ನೀಡಿದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಯಾದ ಕಲ್ಪನಾ ಶೇಟ್,ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ ಮರಾಠೆ,ಸದಾನಂದ ಗಾವಡೆ,ಸುಬ್ರಮಣ್ಯ ಹೆಗಡೆ ಸಹ ಶಿಕ್ಷಕವೃಂದ ಇವರುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್,ದೈಹಿಕ ಶಿಕ್ಷಣ ಪರಿವೀಕ್ಷಕಿ ವಿಜಯಲಕ್ಷ್ಮಿ ಹಂಜಿ,ಎಲ್.ಎಂ.ಪಟಗಾರ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ಕಿರಣಕುಮಾರ ನಾಯ್ಕ ,ರೋಹಿದಾಸ ಮಡಿವಾಳ,ಪಕೀರಪ್ಪ ದರಿಗೊಂಡ,ಸಂತೋಷ ಬೀರ್ನಳೆ,ಶಾಂತಕುಮಾರ ಕೆ ಎಸ್,ವಿನಾಯಕ ಪಟಗಾರ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು,ತಾಲೂಕಾಶಿಕ್ಷಕ ವೃಂದದವರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಗಣ್ಯರು, ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.