ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಕಾಳಿ ಹುಲಿ ಯೋಜನೆ ಯಲ್ಲಿ ಜನರ ಸ್ಥಳಾಂತರ ಯೋಜನೆಯಲ್ಲಿ ಅಕ್ರಮ ತನಿಖೆ ಆದೇಶಿಸಿದ್ದು ತುಂಬಾ ಖುಷಿಯಾದ ಸಂಗತಿ ತಾಗಿದೆ. ಎಂದು ಬಜಾರ್ ಕುಣಂಗ್ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಕುಣಬಿ ಸಮಾಜದ ಮಾಜಿ ಅಧ್ಯಕ್ಷರು ಆದ ಅಜಿತ್ ಮಿರಾಶಿ, ಹೇಳಿದ್ದಾರೆ.

ಜೊಯಿಡಾ ತಾಲೂಕಿನಲ್ಲಿ ಹುಲಿ ಸ್ಥಳಾಂತರ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಗಳ ಅವ್ಯವಹಾರ ಹಾಗೂ ಕಾನೂನು ಬಾಹಿರ ಸ್ಥಳಾಂತರಗೊಳಿಸಿದೆ ಎಂದು ಕಳೆದ ಎರಡು ವರ್ಷಗಳ ಹಿಂದೆ ನಾನು ಜೋಯಿಡಾ ತಾಲೂಕ ಕುಣಬಿ ಸಮಾಜದ ಅಧ್ಯಕ್ಷತೆ ಯಲ್ಲಿ ಇದ್ದಾಗ ಸಾವಿರಾರು ಜನ ಸೇರಿ ಹೋರಾಟ ಮಾಡಿ ಸರ್ಕಾರವನ್ನು ಆಗ್ರಹಿಸಿದ್ದೆವು ಆದರೆ . ಇದೀಗ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದ್ದು ಅದನ್ನು ಸ್ವಾಗತಿಸುತ್ತೇನೆ, ಜೊಯಿಡಾ ತಾಲೂಕಿನ ಬಾಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರನ್ನು ಸ್ಥಳಾಂತರಗೊಳಿದರಲ್ಲಿ ಅತಿ ಹೆಚ್ಚು ಗೋಲ ಮಾಲ್ ನಡೆದಿದೆ, ಸರಕಾರದಿಂದ ಒಂದು ಸಲ ಪರಿಹಾರ ತಗೊಂಡವರು ಮತ್ತೆ ಅವರಿಗೆ ಪರಿಹಾರ ನೀಡಬಾರದು ಎಂಬ ಆದೇಶ ಇದ್ದರೂ ಹಿಂದೆ ಕೆಪಿಸಿ ಇಂದ ಪರಿಹಾರ ತೆಗೆದುಕೊಂಡವರನ್ನೂ ಮತ್ತೆ ಹುಲಿ ಸ್ಥಳಾಂತರ ಯೋಜನೆಯಲ್ಲಿ ಪರಿಹಾರ ಕೊಟ್ಟು ಕೋಟ್ಯಂತರ ರೂಪಾಯಿಯ ಗೋಲಮಾಲ ನಡೆಸಿದ್ದಾರೆ. ಮೊದಲು ಒಂದು ಊರಿನವರು ಎಲ್ಲರೂ ಸ್ಥಳಾಂತರಗೊಳ್ಳಲು ಒಪ್ಪಿದರೆ ಮತ್ತು ಸ್ಥಳೀಯ ಪಂಚಾಯತ ಗ್ರಾಮ ಸಭೆ ಠರಾವು ಮಾಡಿ ಅನುಮತಿ ಕೊಟ್ಟರೆ ಮಾತ್ರ ಪರಿಹಾರ ಕೊಡತೀವಿ ಅಂತ ಅರಣ್ಯ ಇಲಾಖೆ ಯವರು ಹೇಳುತ್ತಿದ್ದರು, ನಂತರ ಊರು ಬಿಟ್ಟ ಒಂದು ಕುಟುಂಬದವರು ಎಲ್ಲರೂ ಸ್ಥಳಾಂತರಗೊಳ್ಳಬೇಕು ಎಂದು ಹೇಳಿದರು, ಆಮೇಲೆ ಯಾರು ಬೇಕಾದರೂ ಹೋಗಬಹುದು ಎಂದರು ತಂದೆ ಇದ್ದು ಮಗ ಹೋಗಬಹುದು ಅಥವಾ ಮಗ ಇದ್ದು ತಂದೆ ಹೋಗಬಹುದು ಎಂದು ಹೇಳಿ ಯಾರಿಗೂ ಬೇಕಾದವರಿಗೂ ಪರಿಹಾರ ಕೊಟ್ಟು ಪಂಚಾಯತಿ ಠರಾವು, ಅನುಮತಿ ಪಡೆಯದೆ ಸ್ಥಳಾಂತರಿಸಲಾಗಿದೆ.

ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದು ಇದನ್ನು ಸಂಪೂರ್ಣ ತನಿಖೆ ಮಾಡಿ ಬಹಿರಂಗ ಪಡಿಸಿ ತಪ್ಪಿತಸ್ಥರಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಎಂದು ಅಜಿತ್ ಮಿರಾಶಿ ಲಿಖಿತ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ