ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಮಣಗಿ ಗ್ರಾಮದ ರೈತ ಮುಕುಂದ ಪಾಟೀಲ ಭತ್ತದ ಬೆಳೆ ಬೆಳೆಯುವ ರೈತನಾಗಿದ್ದು ,ದನಕರುಗಳನ್ನು ಸಾಕಿದ ಕಾರಣ ತನ್ನ ಮನೆಯ ಹಿಂಬಾಗದ ಜಮೀನಿನಲ್ಲಿ ಒಣ ಹುಲ್ಲನ್ನು ಬಣವೆ ಮಾಡಿ ದಾಸ್ತಾನು ಮಾಡಿದ್ದ.ಮೇವನ್ನು ಹಾಳು ಮಾಡುವ ಉದ್ದೇಶದಿಂದ ಯಾರೋ ಕಿಡಿಹೇಡಿಗಳು ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ ಕಾರಣ ಸುಮಾರು ಅಂದಾಜು ಮೂವತ್ತು ಸಾವಿರ ಮೌಲ್ಯದ ಹುಲ್ಲು ಹಾನಿಯಾದ ಘಟನೆ ಮಂಗಳವಾರ ನಸುಕಿನ ವೇಳೆ ನಡೆದಿದೆ ಎಂದು ತಿಳಿದು ಬಂದಿದೆ. ನಸುಕಿನ ವೇಳೆಯಲ್ಲಿ ಬೆಂಕಿ ಹಚ್ಚಿದ ಕಾರಣ ಹುಲ್ಲು ಸುಟ್ಟಿ ಹಾನಿಯಾಗಿದ್ದು,ರೈತನು ಸಾಕಿದ ದನಕರುಗಳಿಗೆ ಮೇವು ಇಲ್ಲದಂತಾಗಿದ್ದು ,ಕಂದಾಯ ಇಲಾಖೆ ಹಾಗೂ ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆದ ನಷ್ಟದ ಪರಿಹಾರ ನೀಡಬೇಕಿದೆ ಎಂಬುದು ರೈತನ ಮನವಿಯಾಗಿದೆ.